ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ; ಜಿ.ಎಸ್. ಶ್ಯಾಮ್ ಸಂತಸ

ದಾವಣಗೆರೆ: ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಳ ಕುರಿತಾಗಿ ರಾಜ್ಯ ಸರ್ಕಾರ ಕ್ಯಾಬಿನೆಟ್‌ನಲ್ಲಿ ಕೈಗೊಂಡ ನಿರ್ಣಯಕ್ಕೆ ದಾವಣಗೆರೆಯಲ್ಲಿ ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪ್ರಬಲ ಆಕಾಂಕ್ಷಿ ಜಿ.ಎಸ್. ಶ್ಯಾಮ್ ಸಂತಸ ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯ ಜಿಎಂ ಐಟಿ ಗೌಸ್ಟ್ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕ ಸಮಾಜಕ್ಕೆ ಸಂಭ್ರಮದ ದಿನವಾಗಿದೆ. ರಾಜ್ಯ ಸರ್ಕಾರ ಸಮಾಜಕ್ಕೆ ಸಿಹಿ ಸುದ್ದಿ ನೀಡಿದೆ. ರಾಜ್ಯ ಸರ್ಕಾರ ಜನಪರವಾಗಿರುವುದಕ್ಕೆ ಇದೇ ಸಾಕ್ಷಿಯಾಗಿದ್ದು, ವಾಲ್ಮೀಕಿ ಶ್ರೀಗಳ ನಿರಂತರ ಧರಣಿ ಸತ್ಯಾಗ್ರಹದ ಫಲ ಇದು. ಇದರ ಫಲವಾಗಿಯೇ ಇಂದು ಸಮಾಜಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಎಸ್‌ಸಿ ಜನಾಂಗಕ್ಕೂ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿರುವುದು ಖುಷಿಯ ವಿಚಾರ ಎಂದಿರುವ ಶ್ಯಾಮ್, ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ಬಿಜೆಪಿ ಶಾಸಕರಿಗೂ ಹಾಗೂ ಮುಖಂಡರಿಗೂ ಜನತೆ ಪರವಾಗಿ ತುಂಬು ಹೃದಯದ ಧನ್ಯವಾದ ಹೇಳಿ ಶ್ಲಾಘಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

08/10/2022 10:04 pm

Cinque Terre

5.8 K

Cinque Terre

0