ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಮಳೆ ಹಾನಿಯ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡುವಲ್ಲಿ ತಾರತಮ್ಯ

ದಾವಣಗೆರೆ: ಮಳೆ ಹಾನಿಯ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡುವಲ್ಲಿ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಹಾಗೂ ತಹಶೀಲ್ದಾರ್ ರಶ್ಮಿಯವರು ತಾರತಮ್ಯ ಮಾಡಿದ್ದಾರೆಂದು ಆರೋಪಗಳು ಕೇಳಿ ಬರುತ್ತಿವೆ. ಈ ಹಿಂದೆ ಎಂ.ಪಿ. ರೇಣುಕಾಚಾರ್ಯ ಹಾಗೂ ತಹಶೀಲ್ದಾರ್ ರಶ್ಮಿಯವರ ವಿರುದ್ಧ ಮಾಜಿ ಕಾಂಗ್ರೆಸ್ ಶಾಸಕ ಡಿಜಿ ಶಾಂತನ ಗೌಡ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಹೋರಾಟ ಮಾಡಿದ್ದರು.

ಆದರೆ ಇದೀಗ ಮತ್ತೇ ಹೊನ್ನಾಳಿ ತಾಲೂಕಿನಲ್ಲಿ ನಿತ್ಯ ಹಗರಣ ಹೊರಬಿಳುತ್ತಿವೆ. ವಿಶೇಷವಾಗಿ ಹೊನ್ನಾಳಿ ತಹಶೀಲ್ದಾರ್ ರಶ್ಮಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕೈಗೊಂಬೆಯಾಗಿ‌ ಕೆಲಸ ಮಾಡ್ತಿದ್ದಾರೆ. ಮಳೆ ಹಾನಿಯ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡುತ್ತಿಲ್ಲ. ಕರ್ತವ್ಯ ಲೋಪ ಸಹ ಮಾಡಿದ್ದಾರೆ‌. ತಕ್ಷಣ ಅವನ್ನ ಅಮಾನತ್ತು ಮಾಡಿ ಎಂದು ಜನರು ಆಗ್ರಹಿಸಿದ್ದಾರೆ.

ಇನ್ನು ಹೊನ್ನಾಳಿ ತಾಲೂಕಾ ಕಚೇರಿಯಲ್ಲಿ ಆಮ್ ಅದ್ಮಿ‌ ಪಕ್ಷದ ಕಾರ್ಯಕರ್ತರ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಪಕ್ಷದ ಅಧ್ಯಕ್ಷ ಗುರುಪಾದಯ್ಯ ಮಠದ ಅವರು ಶಾಸಕ ರೇಣುಕಾಚಾರ್ಯ ಹಾಗೂ ತಹಶೀಲ್ದಾರ್ ರಶ್ಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Edited By : Nagesh Gaonkar
PublicNext

PublicNext

29/09/2022 07:01 pm

Cinque Terre

31.9 K

Cinque Terre

0