ಸದನದ ಒಳಗೆ ಮಾತನಾಡಿದರೆ ಪ್ರಕರಣ ದಾಖಲು ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ತಿಳಿದಿದ್ದು, ಬಹಿರಂಗವಾಗಿ ಮಾತನಾಡುತ್ತಿಲ್ಲ. ನಿಮಗೆ ತಾಕತ್ತಿದ್ದರೆ, ಗಂಡಸಾಗಿದ್ದರೆ ಸದನದಿಂದ ಹೊರಬಂದು ಮಾತನಾಡಿ. ಹೆಂಗಸರಂತೆ ಮಾತನಾಡಬೇಡಿ. ಇದೇ ರೀತಿ ಮಾತನಾಡಿದರೆ ನಿಮ್ಮ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಅಖಿಲ ಕರ್ನಾಟಕ ಡಾ. ಅಂಬೇಡ್ಕರ್ ಬೇಡಜಂಗಮ್ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಂ. ಪಿ. ದಾರಕೇಶ್ವರಯ್ಯ ತಿಳಿಸಿದ್ದಾರೆ.
ಬೇಡರ ಸಂಗಮ ಎಸ್ಸಿ ಸರ್ಟಿಫಿಕೇಟ್ ಪಡೆದು ನಾನಾಗಲೀ, ನನ್ನ ಸಹೋದರ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರಾಗಲೀ, ಅವರ ಪುತ್ರಿಯಾಗಲೀ ಸರ್ಕಾರಿ ಸೌಲಭ್ಯ ಪಡೆದಿಲ್ಲ. ರಾಜಕೀಯ ಕಾರಣಕ್ಕೋಸ್ಕರ ಆರೋಪ ಮಾಡಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟೀಕರಣ ನೀಡಿದರು.
2012ರಲ್ಲಿಯೇ ಬೇಡರ ಜಂಗಮ ಎಸ್ಸಿ ಪ್ರಮಾಣ ಪತ್ರವನ್ನು ನಾನು ಹಾಗೂ ರೇಣುಕಾಚಾರ್ಯ ಪುತ್ರಿ ಎಂ. ಆರ್. ಚೇತನಾ ಸರ್ಟಿಫಿಕೇಟ್ ಪಡೆದಿದ್ದೇವೆ. 2012ರಲ್ಲಿ ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್ ನೀಡಿದ್ದ ಬೇಡರ ಜಂಗಮ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಕರ್ನಾಟಕ ಉಚ್ಛ ನ್ಯಾಯಾಲಯವು ಮಾನ್ಯತೆ ಮಾಡಿ ಆದೇಶಿಸಿದೆ. ನಾನು ಸಹ ಕಲ್ಬುರ್ಗಿ, ಕೊಪ್ಪಳದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಅಫಿಡವಿಟ್ ಅಂಗೀಕಾರವಾಗಿತ್ತು. ಹಾಗಾಗಿ ನಾವು ಬೇಡರ ಜಂಗಮ ಎಸ್ಸಿ ಪ್ರಮಾಣ ಪತ್ರ ಪಡೆದಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
Kshetra Samachara
28/03/2022 04:09 pm