ದಾವಣಗೆರೆ: ಹೊನ್ನಾಳಿ ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೈಭವ, ಸಂಭ್ರಮದಿಂದ ನೆರವೇರಿತು. ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಪುನೀತ್ ರಾಜಕುಮಾರ್ ಅಭಿನಯದ ಜಾಕಿ ಸಿನಿಮಾದ ಹಾಡಿಗೆ ಹುಚ್ಚೆದ್ದು ಕುಣಿದಿದ್ದಾರೆ.
ಹೊನ್ನಾಳಿ ತಾಲೂಕಿನ ಮಾರಿಕೊಪ್ಪ ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ ರಾಜಕೀಯ ಕಾರ್ಯದರ್ಶಿ ಟ್ರ್ಯಾಕ್ಟರ್ ಚಲಾಯಿಸಿದರು. ಯುವಕರೂ ನಾಚುವಂತೆ ಕುಣಿದು ಕುಪ್ಪಳಿಸಿದರು.
ಡಿಜೆ ಸದ್ದಿಗೆ ಯುವಕರು ಡ್ಯಾನ್ಸ್ ಮಾಡಿದರು. ಸ್ಥಳಕ್ಕೆ ಬಂದ ರೇಣುಕಾಚಾರ್ಯ ಅವರಿಗೆ ಪುಷ್ಪಮಾಲೆ ಹಾಕಿ ಸ್ವಾಗತಿಸಲಾಯಿತು. ಯರೇಚಿಕ್ಕನಹಳ್ಳಿ, ಕುಂದೂರು, ಯಕ್ಕನಹಳ್ಳಿ, ತಕ್ಕನಹಳ್ಳಿ, ಕುಮಾರಘಟ್ಟೆ ಸೇರಿದಂತೆ ಹೊನ್ನಾಳಿ ತಾಲೂಕಿನ ವಿವಿಧೆಡೆ ಅದ್ಧೂರಿಯಾಗಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಯಿತು. ಒಟ್ಟಾರೆ ಹೋದ ಕಡೆಗಳೆಲ್ಲಾ ಡ್ಯಾನ್ಸ್ ಮಾಡುವ ರೇಣುಕಾಚಾರ್ಯ ಅಪ್ಪು ಫೋಟೋ ಹಿಡಿದು ಕುಣಿಯುತ್ತಾ ಎಲ್ಲರನ್ನೂ ರಂಜಿಸಿದರು.
PublicNext
10/09/2022 10:24 am