ದಾವಣಗೆರೆ: ಸೋಮವಾರ (ನಿನ್ನೆ)ಯಿಂದ ಸುರಿದ ಧಾರಕಾರ ಮಳೆಗೆ ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮದ ಜನ ಪತರಗುಟ್ಟಿಹೋಗಿದ್ದಾರೆ. ಭಾರಿ ಮಳೆಯಿಂದಾಗಿ ಹೆಬ್ಬಾಳು ಗ್ರಾಮದಲ್ಲಿ ಅವಾಂತರಗಳನ್ನೇ ಸೃಷ್ಟಿ ಮಾಡಿದ್ದು, ಗ್ರಾಮಸ್ಥರು ಇಡೀ ರಾತ್ರಿ ಜಗಾರಣೆ ಮಾಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಇದೇ ಗ್ರಾಮದಲ್ಲಿರುವ ಸರಮಾಲೆ ಶ್ರೀ ರುದ್ರೇಶ್ವರ ಪ್ರೌಢಶಾಲೆಗೆ ಮಳೆ ನೀರು ನುಗ್ಗಿದ್ದರಿಂದ ಇಡೀ ಶಾಲೆ ಸಂಪೂರ್ಣ ಜಲವೃತವಾಗಿದೆ.
ಇದಲ್ಲದೆ ಶ್ರೀ ರುದ್ರೇಶ್ವರ ಪ್ರಾಥಮಿಕ ಮತ್ತು ನರ್ಸರಿ ಶಾಲೆ ಕೂಡ ಸಂಪೂರ್ಣ ಜಲವೃತವಾಗಿದ್ದು, ಸಾಕಷ್ಟು ಮನೆಗಳಿಗೆ ನೀರು ನುಗ್ಗಿದರಿಂದ ಮಹಿಳೆಯರು ನೀರನ್ನು ಹೊರ ಹಾಕುವ ಕೆಲಸ ಮಾಡಿ ಸುಸ್ತ್ ಹೊಡೆದ್ರು. ಇನ್ನು ಇದಲ್ಲದೆ ಇದೇ ಗ್ರಾಮದ ಸುತ್ತಮುತ್ತಲಿನ ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಹೊಲ ಮತ್ತು ಬಾಳೆ ತೋಟಗಳು ಮಳೆ ನೀರಿನಿಂದ ಜಲಾವೃತವಾಗಿದ್ದರಿಂದ ರೈತರು ಆತಂಕದಲ್ಲಿ ಕಾಲಕಳೆಯುತ್ತಿದ್ದಾರೆ.
ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸಂಸದ ಜಿಎಂ ಸಿದ್ದೇಶ್ವರ್ ರವರ ಒಡೆತನದ ಜ್ಯೂಸ್ ತಯಾರಕ ಘಟಕ ಜಿಎಂ ಆಗ್ರೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಳೆ ನೀರಿನಿಂದ ಮುಳುಗಡೆಯಾಗಿದೆ. ಹೊನ್ನೂರು ಹಾಗೂ ವಡ್ಡಿನಹಳ್ಳಿ ಕೆರೆ ಕೋಡಿಯಿಂದ ಅಪಾರ ಪ್ರಮಾಣ ನೀರು ಹರಿದು ಬರುತ್ತಿರುವ ಹಿನ್ನಲೆಯಲ್ಲಿ ಹಳ್ಳದ ಪಕ್ಕದಲ್ಲಿರುವ ಜಿಎಂ ಆಗ್ರೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಫ್ಯಾಕ್ಟರಿ ಮುಂಭಾಗ ಕೆರೆ ಸೃಷ್ಟಿಯಾಗಿದಂತಾಗಿದೆ. ಫ್ಯಾಕ್ಟರಿ ಜಲಾವೃತವಾದ ಹಿನ್ನಲೆಯಲ್ಲಿ ಸಿಬ್ಬಂದಿ ಗೇಟ್ ಬಂದ್ ಮಾಡಿದ್ದು, ಸೆಕ್ಯುರಿಟಿ ರೂಂ, ಫಿಲ್ಟರ್ , ಬಾಯ್ಲರ್ ಸೇರಿದಂತೆ ಹಲವು ಮಿಷನ್‌ಗಳು ಜಲಾವೃತವಾಗಿವೆ.
PublicNext
11/10/2022 01:24 pm