ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಗಲಭೆ ನಡೆದ ಸ್ಥಳದಿಂದಲೇ ಇಂದು ಬೃಹತ್ ಶೋಭಾಯಾತ್ರೆಗೆ ಚಾಲನೆ

ದಾವಣಗೆರೆ: ದಾವಣಗೆರೆಯಲ್ಲಿ ಗಲಭೆ ನಡೆದ ಸ್ಥಳದಿಂದಲೇ ಇಂದು ಬೆಳಗ್ಗೆ 12 ಗಂಟೆಯಿಂದ ಶುರುವಾಗಲಿರುವ ಬೃಹತ್ ಶೋಭಾಯಾತ್ರೆಗೆ ಚಾಲನೆ ನೀಡಲಾಗುವುದು.

ಕಳೆದ ಸೆಪ್ಟೆಂಬರ್ 19ರಂದು ಬೇತೂರು ರಸ್ತೆಯಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿ ಗಲಭೆಯಾಗಿತ್ತು. ಅದೇ ಸ್ಥಳದಿಂದ ಇಂದು ವಿಶ್ವ ಹಿಂದೂ ಪರಿಷತ್ತ್ ಹಾಗೂ ಸಾರ್ವಜನಿಕ ದಸರಾ ಸಮಿತಿ ಶೋಭಾಯಾತ್ರೆ ಕೈಗೊಂಡಿದೆ. ಶೋಭಾಯಾತ್ರೆ ನಡೆಯುವ ಮಾರ್ಗದ ಉದ್ದಕ್ಕೂ ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ಉಗ್ರ ನರಸಿಂಹನ ಮೂರ್ತಿಯನ್ನು ಮುಖ್ಯದ್ವಾರಕ್ಕೆ ಪ್ರತಿಷ್ಠಾಪನೆ ಮಾಡಲಾಗಿದೆ.

ಎಸ್‌ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಶೋಭಾಯಾತ್ರೆಗೆ ಭಾರಿ ಭದ್ರತೆವಹಿಸಲಾಗಿದೆ. 1500ಕ್ಕೂ ಹೆಚ್ಚು ಪೊಲೀಸರು, ಡಿಆರ್ ಹಾಗೂ ಕೆಎಸ್ಆರ್‌ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ವಿವಾದಾತ್ಮಕ ಘೋಷಣೆ, ಪೋಸ್ಟರ್ ಪ್ರದರ್ಶನ ಮಾಡಿದರೆ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿರುವ ಮಸೀದಿಗಳಿಗೆ ಪೊಲೀಸರ ಬಿಗಿ ಭದ್ರತೆ ಒದಗಿಸಲಾಗಿದೆ.

Edited By : Shivu K
PublicNext

PublicNext

12/10/2024 02:31 pm

Cinque Terre

28.65 K

Cinque Terre

1

ಸಂಬಂಧಿತ ಸುದ್ದಿ