ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಸರ್ಕಾರಿ UBDT ಇಂಜಿನಿಯರಿಂಗ್ ಕಾಲೇಜು ಶುಲ್ಕ ಹೆಚ್ಚಳ - ಬಂದ್‌ಗೆ ಕರೆ...!

ದಾವಣಗೆರೆ : ದಾವಣಗೆರೆಯ ಯುಬಿಡಿಟಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್‌ನ್ನು ಖಾಸಗೀಕರಣಕ್ಕೆ ಒಳಗಾಗಿದೆ.

ಬಡ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಸಿಗಬೇಕಿದ್ದ ಸೀಟ್‌ಗಳನ್ನು ಈಗ ಮಾರಾಟಕ್ಕಿಟ್ಟಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಇಲ್ಲಿ 100ಕ್ಕೆ ನೂರರಷ್ಟು ಸರ್ಕಾರಿ ಕೋಟಾದ ವಿದ್ಯಾರ್ಥಿಗಳಿಗೆ ಸೀಟ್ ಹಂಚಿಕೆ ಮಾಡುತ್ತಿದ್ದು, ಈಗ 50% ಸರ್ಕಾರಿ ಕೋಟಾ ಇನ್ನು 50% ಮ್ಯಾನೇಜ್ಮೆಂಟ್ ಕೋಟಾದಲ್ಲಿ ವಿದ್ಯಾರ್ಥಿಗಳನ್ನು ಅಡ್ಮಿಷನ್ ಮಾಡಿಸಿಕೊಳ್ಳುತ್ತಿದ್ದಾರೆ.

ಇದೇ ವಿಚಾರಕ್ಕೆ ದಾವಣಗೆರೆ ಬಂದ್‌ಗೆ AIDSO ಸಂಘಟನೆ ಕರೆ ನೀಡಿದ್ದು, ಬಂದ್‌ಗೆ ರೈತ ಸಂಘಟನೆ, ಕನ್ನಡಪರ ಸಂಘಟನೆಗಳು, ಆಟೋ, ಹೊಟೇಲ್, ಖಾಸಗಿ ಬಸ್ ಮಾಲೀಕರು ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ.

ಇನ್ನೂ ಬೆಳಗಿನ ಜಾವ ನಾಲ್ಕು ಗಂಟೆಗೆ ಪ್ರತಿಭಟನೆ ಆರಂಭವಾಯಿತು, ನಗರದ ಹೊಸ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ನಂತರ ಬಸ್ ನಿಲ್ದಾಣದ ಮುಂದಿನ ಹಳೆ ಪಿಬಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.

Edited By : Manjunath H D
PublicNext

PublicNext

16/10/2024 06:14 pm

Cinque Terre

22.09 K

Cinque Terre

0

ಸಂಬಂಧಿತ ಸುದ್ದಿ