ದಾವಣಗೆರೆ: ವಿಜಯಪುರದಿಂದ ಶುರುವಾಗಿರುವ ವಕ್ಫ್ ಆಸ್ತಿ ವಿವಾದ ಈಗಾಗಲೇ ರಾಜ್ಯ ವ್ಯಾಪಿ ವಿಸ್ತರಿಸಿದೆ. ರೈತರ ಜಮೀನುಗಳು, ಗೋಮಾಳ, ಮಠ ಮಂದಿರಗಳು, ಕೆರೆಗಳು, ಶಾಲೆಗಳು ಕೂಡ ವಕ್ಫ್ ಗೆ ಸಂಬಂಧಿಸಿದ ಆಸ್ತಿ ಎಂದು ಬಂದಿದ್ದು, ಪಹಣಿಯಲ್ಲಿ ಸದ್ದಿಲ್ಲದೆ ವಕ್ಫ್ ಬೋರ್ಡ್ ನ ಹೆಸರು ಕಾಲಂ ನಂಬರ್ 11ರಲ್ಲಿ ಕಾಣಿಸಿಕೊಂಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದನ್ನೇ ಬಿಜೆಪಿ ನಾಯಕರು ಆಸ್ತ್ರವಾಗಿ ಬಳಸಿಕೊಂಡಿದ್ದು, ಜನರು ರಾಜ್ಯ ಸರ್ಕಾರದ ವಿರುದ್ಧ ಹಾಗೂ ಸಚಿವ ಜಮೀರ್ ಅಹಮದ್ ವಿರುದ್ದ ಹರಿಹಾಯುತ್ತಿದ್ದಾರೆ.
ಅದಕ್ಕೆ ಮತ್ತೊಂದು ಆಸ್ತ್ರ ಎನ್ನುವಂತೆ ದಾವಣಗೆರೆಯ ಪ್ರತಿಷ್ಠಿತ ಪಿ.ಜೆ. ಬಡಾವಣೆಯ ಸರ್ವೇ ನಂಬರ್ 53ರಲ್ಲಿ ಬರುವ 4 ಎಕರೆ 13 ಗುಂಟೆ ಜಾಗದ ಪಹಣಿಯಲ್ಲಿ ಬಂದಿದೆ. 1992-1993ರಲ್ಲಿ ಈ ಪಿ.ಜೆ. ಬಡಾವಣೆ ಬೀರದೇವರ ಪೂಜಾರಿ ಎಂದು ಕೈ ಬರಹದ ಪಹಣಿಯಲ್ಲಿ ಕಾಣಿಸಿಕೊಂಡಿದೆ. ಆದರೆ, 2015ರಲ್ಲಿರುವ ಪಹಣಿಯಲ್ಲಿ ಖಬರಸ್ಥಾನ ಸುನ್ನಿ ವಕ್ಫ್ ಎಂದು ಬಂದಿದೆ.
ಅಲ್ಲದೆ, ಖಬರಸ್ಥಾನ ಇರುವ ಜಾಗದಲ್ಲಿ ಜನವಸತಿ ಪ್ರದೇಶ ಮಾಡುವವರೆಗೂ ಅಧಿಕಾರಿಗಳು ಏನ್ ಮಾಡ್ತಾ ಇದ್ರು? ಅಲ್ಲದೆ, ಪಾಲಿಕೆಯಿಂದ ಕಂದಾಯ ಕೂಡ ಕಟ್ಟಿಸಿ ಕೊಳ್ಳುತ್ತಿದ್ದಾರೆ. ಏರಿಯಾದಿಂದ ಒಂದು ಕಿಲೋಮೀಟರ್ ದೂರದಲ್ಲಿ ಹತ್ತಾರು ಎಕರೆಯಲ್ಲಿ ಖಬರಸ್ಥಾನ ಕೂಡ ಇದೆ. ಅದರೂ ಈಗ ಸರ್ವೇ ನಂಬರ್ 53ರಲ್ಲಿ ಖಬರಸ್ಥಾನ ಸುನ್ನಿ ವಕ್ಫ್ ಹೆಸರು ಬಂದಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
PublicNext
09/11/2024 07:42 pm