ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಜಯಂತಿಗಳು ಆಚರಣೆಗೆ ಸೀಮಿತಗೊಳ್ಳಬಾರದು; ಶಾಸಕ ಎಸ್.ರಾಮಪ್ಪ ಅಭಿಪ್ರಾಯ

ಹರಿಹರ: ತ್ಯಾಗ ಹಾಗೂ ಸೇವೆಯ ಮೂಲಕ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂಬುದನ್ನು ಮಹರ್ಷಿ ವಾಲ್ಮೀಕಿ ತಮ್ಮ ರಾಮಾಯಣ ಮಹಾಕಾವ್ಯ ಮೂಲಕ ವಿಶ್ವಕ್ಕೆ ಸಂದೇಶ ಕೊಟ್ಟಿದ್ದಾರೆ ಎಂದು ಶಾಸಕ ಎಸ್.ರಾಮಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಮಾಯಣದಂತಾ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸದೇ ಎಲ್ಲಾ ಸಮಾಜಕ್ಕೂ ಅವರ ತತ್ವ ಸಿದ್ದಾಂತಗಳು ಪಸರಿಸಬೇಕು.

ಇಂತಹ ಮಹಾಪುರುಷರನ್ನು ಕೇವಲ ಜಯಂತಿ ಆಚರಣೆಗೆ ಸೀಮಿತಗೊಳಸಿದೆ ಇಂದಿನ ಯುವ ಪೀಳಿಗೆಗೆ ಇವರ ಜೀವನ ಚರಿತ್ರೆಯ ಅರಿವನ್ನು ಮೂಡಿಸುವ ಕೆಲಸವಾಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ.ಎಂ.ಬಿ.ಅಶ್ವಥ್, ಐ.ಬಸವರಾಜ್, ಬಿಇಒ ಸಿದ್ದಪ್ಪ, ಇಒ ಗಂಗಾಧರನ್, ಸಮಾಜ ಕಲ್ಯಾಣ ಇಲಾಖೆ ನಸರುದ್ದಿನ್, ಎಇಇ ಗಿರೀಶ್, ತೋಟಗಾರಿಕೆ ಜಿ.ಪಿ.ರೇಖಾ, ಕೃಷಿ ಇಲಾಖೆ ನಾರನಗೌಡ, ಆರೋಗ್ಯ ಇಲಾಖೆ ಎಂ.ಉಮ್ಮಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಭೂಮೇಶ್, ಗಂಗಮ್ಮ, ಪಾರ್ವತಿ, ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Edited By : Abhishek Kamoji
Kshetra Samachara

Kshetra Samachara

10/10/2022 08:41 pm

Cinque Terre

4.95 K

Cinque Terre

0