ದಾವಣಗೆರೆ : ನಗರದ ಚಿಗಟೇರಿ ಆಸ್ಪತ್ರೆ ಮುಂಭಾಗ ಕೆಎಸ್‌ಆರ್‌ಟಿಸಿ ಬಸ್ ಆಟೋಗೆ ಡಿಕ್ಕಿಯಾಗಿ ಚಾಲಕರ ನಡುವೆ ಮಾತಿನ ಚಕಮಕಿಯಾದ ಘಟನೆ ನಡೆದಿದೆ. ದಾವಣಗೆರೆ ನಗರದ ಶಾಮನೂರು ರಸ್ತೆಯಲ್ಲಿರುವ ಚಿಗಟೇರಿ ಆಸ್ಪತ್ರೆ ಮುಂಭಾಗ ಗುಂಡಿ ಸರ್ಕಲ್ ಕಡೆಯಿಂದ ಬರುತ್ತಿದ್ದ ಆಟೋಗೆ ಕೆಎಸ್‌ಆರ್‌ಟಿಸಿ ಸಿಟಿ ಬಸ್ ಆಟೋಗೆ ಹಿಂಬದಿಯಲ್ಲಿ ಡಿಕ್ಕಿಯಾಗಿದೆ. ಈ ಸಂಬಂಧ ಬಸ್ ಹಾಗೂ ಆಟೋ ಚಾಲಕರ ನಡುವೆ ಕೆಲ ಕಾಲ ಮಾತಿನ ಚಕಮಕಿಯಾಗಿದೆ.
ಆಟೋ ಚಾಲಕ ಆಟೋಗೆ ಆದ ಡ್ಯಾಮ್ಯಾಜನ್ನು ಸರಿ ಮಾಡಿಸಿಕೊಡಲು ಬಸ್ ಚಾಲಕನಿಗೆ ತಾಕೀತು ಮಾಡಿದ್ದಾನೆ. ಇದಿರಿಂದ ಇಬ್ಬರ ನಡುವೆ ಮಾತಿನ ಚಕಮಕಿಯಾಗಿ ಮೊದಲ ಒಪ್ಪದ ಬಸ್ ಚಾಲಕ ನಂತರ ಡಿಪೋಗೆ ಬರಲು ಸೂಚಿಸಿ ಅಲ್ಲಿಂದ ತೆರಳಿದ್ದಾರೆ.
Kshetra Samachara
07/10/2022 07:41 pm