ಬೆಂಗಳೂರು: ದೂರದ ದುಬೈನಲ್ಲಿ ಕನ್ನಡ ನಾಡಿನ ಪ್ರತಿಭಾವಂತ ಮಕ್ಕಳನ್ನ ದುಬೈ ಕನ್ನಡ ಸಂಘದಿಂದ ಗೌರವಿಸಲಾಗಿದೆ. ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡವು ಕಳೆದ ಶನಿವಾರ ದುಬೈನ ಅಬು ಹೈಲ್‌ನಲ್ಲಿರುವ ಪರ್ಲ್ ವಿಸ್ಡಮ್ ಶಾಲಾ ಸಭಾಂಗಣದಲ್ಲಿ ಸಂಯುಕ್ತ ಅರಬ್ ಸಂಸ್ಥಾನದ ಕನ್ನಡ ಮಕ್ಕಳಿಗಾಗಿ ವಿವಿಧ ರೀತಿಯ ಕಲಾ ಪ್ರತಿಭಾ ಸ್ಪರ್ಧೆಯನ್ನ ಆಯೋಜಿಸಿದ್ರು. ಅದ್ದೂರಿಯಾಗಿ ನಡೆದ ಗ್ರಾಂಡ್ ಫೈನಲ್ ಕಾರ್ಯಕ್ರಮ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಯುಎಇ ಕನ್ನಡ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಕೊಟ್ಟು ಪುರಸ್ಕರಿಸಲಾಯಿತು.
ದೀಪ ಬೆಳಗಿಸುವುದೊಂದಿಗೆ ಕಾರ್ಯಕ್ರಮಕ್ಕೆ ಆರಂಭಿಸಿ ಇತ್ತೀಚೆಗೆ ಸಾವನ್ನಪ್ಪಿದ ಯುಎಇ ರಾಷ್ಟ್ರಾಧ್ಯಕ್ಷ ಶೇಕ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಶ್ರದ್ದಾಂಜಲಿ ಅರ್ಪಿಸಿ ಸಂಯುಕ್ತ ಅರಬ್ ಸಂಸ್ಥಾನದ ರಾಷ್ಟ್ರ ಗೀತೆ, ಭಾರತದ ರಾಷ್ಟ್ರಗೀತೆ ಮತ್ತು ಕರ್ನಾಟಕ ನಾಡ ಗೀತೆ ಹೇಳುವ ಮೂಲಕ ದುಬೈ ಕಾರ್ಯಕ್ರಮದಲ್ಲಿ ಕನ್ನಡದ ಕಂಪು ಹರಿಸಿದ್ದಾರೆ.
ಇನ್ನೂ ಈ ಕಾರ್ಯಕ್ರಮಕ್ಕೆ ಖ್ಯಾತ ಸಂಗೀತ ನಿರ್ದೇಶಕ ಕೆ.ಕಲ್ಯಾಣ್ ಸೇರಿದಂತೆ ಹಿನ್ನೆಲೆ ಗಾಯಕಗಾಯಕಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.
PublicNext
28/06/2022 12:41 pm