ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿ 35 ದಿನದಲ್ಲಿ 22 ಲಕ್ಷ ರೂ.ಕಾಣಿಕೆ ಸಂಗ್ರಹ

ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠದ ಕಾಣಿಕೆ ಪೆಟ್ಟಿಗೆಯಲ್ಲಿ 22,16,046 ರೂ. ಕಾಣಿಕೆ ಸಂಗ್ರಹವಾಗಿದೆ. ಬುಧವಾರದಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶ್ರೀಮಠದ ಶಾಖೆಯ ವ್ಯವಸ್ಥಾಪಕ, ಸಿಬ್ಬಂದಿ, ಮಠದ ಭಕ್ತರ ಸಮ್ಮುಖದಲ್ಲಿ ಕಾಣಿಕೆ ಪೆಟ್ಟಿಗೆ ತೆರೆಯಲಾಯಿತು. ಕೇವಲ 35 ದಿನಗಳಲ್ಲಿ (ಡಿ. 15 ರಿಂದ ಜ. 19ರವರೆಗೆ) ಈ ಕಾಣಿಕೆ ಸಂಗ್ರಹವಾಗಿರುತ್ತದೆ.

9,955 ರೂ. ಮೌಲ್ಯದ ಚಿನ್ನಾಭರಣ ಸಾಮಗ್ರಿಗಳು ಇದ್ದವು. ಎಣಿಕೆ ಮೇಲ್ವಿಚಾರಣೆಯನ್ನು ಟ್ರಸ್ಟ್ ಕಮಿಟಿಯ ಚೇರ್ಮನ್ ಡಿ.ಡಿ.ಮಾಳಗಿ, ವೈಸ್ ಚೇರ್ಮನ್ ಡಾ. ಗೋವಿಂದ ಮಣ್ಣೂರ, ಗೌರವ ಕಾರ್ಯದರ್ಶಿ ಜಗದೀಶ ಮಗಜಿಕೊಂಡಿ, ಧರ್ಮದರ್ಶಿಗಳಾದ ಎಸ್.ಐ. ಕೋಳಕೂರ, ಜಿ.ಎಸ್. ನಾಯಕ, ಮಹೇಶಪ್ಪ ಹನಗೋಡಿ, ಧರಣೀಂದ್ರ ಜವಳಿ, ವೈ.ಎ. ದೊಡ್ಡಮನಿ ಹಾಗೂ ಇತರರು ವಹಿಸಿದ್ದರು.

Edited By : Vijay Kumar
PublicNext

PublicNext

21/01/2022 09:48 am

Cinque Terre

22.99 K

Cinque Terre

3