ಗದಗ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೀತಿರೋ ಕನ್ನಡಕ್ಕಾಗಿ ನಾವು ಅಭಿಯಾನದ ಹಿನ್ನೆಲೆ ಮುದ್ರಣ ಕಾಶಿ ಗದಗದಲ್ಲಿ ಗೀತಗಾಯನ ನಡೆಯಿತು.ಜಿಲ್ಲೆಯ ಜಿಮ್ಸ್, ಜಿಲ್ಲಾಡಳಿತ ಭವನ ಸೇರಿದಂತೆ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ಗಾಯನ ಮೊಳಗಿತು.ಜಿಲ್ಲಾ ಕ್ರೀಡಾಂಗಣದಲ್ಲಿ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.38 ಬೆಟಾಲಿಯನ್ ಎನ್ ಸಿಸಿ ಕೆಡೆಟ್ಸ್, ಪೊಲೀಸ್, ಹೋಮ್ ಗಾರ್ಡ್, ಅಬಕಾರಿ, ಪ್ಲಟೂನ್ ಸಮ್ಮುಖದಲ್ಲಿ ಗೀತಗಾಯನ ನಡೀತು.ಪಂಡಿತ ಪಂಚಾಕ್ಷರಿ ಗವಾಯಿ ಸಂಗೀತ ಪಾಠಶಾಲೆಯ 8 ಜನ ವಿದ್ಯಾರ್ಥಿಗಳು ನಾಡ ಗೀತೆ, ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳನ್ನ ಹಾಡಿದ್ರು.ಸಂಗೀತ ವಿದ್ಯಾರ್ಥಿಗಳ ಧ್ವನಿಯೊಂದಿಗೆ ಅಧಿಕಾರಿಗಳು, ಎನ್ ಸಿಸಿ ಕೆಡೆಟ್ಸ್ ಧ್ವನಿ ಗೂಡಿಸಿದ್ರು.
PublicNext
28/10/2021 05:49 pm