ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಚನ್ನಪಟ್ಟಣದ ಆಟಿಕೆಗಳ ಮಳಿಗೆ ಆರಂಭ

ಬೆಂಗಳೂರು: ವಿಶ್ವ ಪ್ರಸಿದ್ಧಿ ಹೊಂದಿರುವ ಕರ್ನಾಟಕದ ಚನ್ನಪಟ್ಟಣದ ಗೊಂಬೆ ಹಾಗೂ ಆಟಿಕೆಗಳ ಮಾರಾಟ ಮಳಿಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಆರಂಭವಾಗಿದೆ.

ಈ ಬಗ್ಗೆ ನೈರುತ್ಯ ರೈಲ್ವೆ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ, ಶ್ಯಾಮ್ ಸಿಂಗ್, ಅವರು ಇಂದು ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ 2022-23ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಒಂದು ನಿಲ್ದಾಣ-ಒಂದು ಉತ್ಪನ್ನ ಯೋಜನೆಯಡಿ ‘ಚನ್ನಪಟ್ಟಣ ಆಟಿಕೆಗಳ ಮಳಿಗೆ’ಯನ್ನು ಉದ್ಘಾಟಿಸಿದರು ಎಂದು ತಿಳಿಸಿದೆ.ಇದು ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡಲು ಗೌರವಾನ್ವಿತ ಪ್ರಧಾನ ಮಂತ್ರಿಗಳ ಆತ್ಮ ನಿರ್ಭರ ಭಾರತ್ ಅಭಿಯಾನದ ಅಡಿಯಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಲು ರೈಲ್ವೆ ಸಚಿವಾಲಯದ ಉಪಕ್ರಮವಾಗಿದೆ.

ಸ್ಥಳೀಯ ಕುಶಲಕರ್ಮಿಗಳು ತಮ್ಮ ಉತ್ಪನ್ನವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾರಾಟ ಮಾಡಲು ಪ್ರೋತ್ಸಾಹಿಸುವುದು ಉಪಕ್ರಮದ ಉದ್ದೇಶವಾಗಿದೆ. ಕೆಎಸ್‌ಆರ್ ಬೆಂಗಳೂರು ಪ್ರಸಿದ್ಧ ಚನ್ನಪಟ್ಟಣದ ಆಟಿಕೆಗಳನ್ನು ಮಾರಾಟ ಮಾಡುವ ರಾಜ್ಯದ ಮೊದಲ ರೈಲು ನಿಲ್ದಾಣವಾಗಿದೆ ಎಂದು ತಿಳಿಸಿದೆ.

Edited By : Nagaraj Tulugeri
PublicNext

PublicNext

25/03/2022 04:25 pm

Cinque Terre

104.41 K

Cinque Terre

0

ಸಂಬಂಧಿತ ಸುದ್ದಿ