ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪರಿವರ್ತನೆಯ ಹರಿಕಾರ ಕನಕದಾಸರ ಸಾಹಿತ್ಯ ಪ್ರಸ್ತುತ ಕಾಲಕ್ಕೆ ಸಮಂಜಸ - ಸಿ.ಎಂ ಬೊಮ್ಮಾಯಿ

ಬೆಂಗಳೂರು: ಕನಕದಾಸ ಜಯಂತಿಯ ಆಚರಣೆಯ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನಕದಾಸರನ್ನು ಸ್ಮರಿಸಿ ದಾಸರಲ್ಲಿ ಅತ್ಯಂತ ಶ್ರೇಷ್ಠ ದಾಸರಾದ ತತ್ವಜ್ಞಾನಿ ಹಾಗೂ ಸಮಾಜ ಸುಧಾರಕ ಕನಕದಾಸರು ವಿಶ್ವ ಮಾನವ ಕಲ್ಪನೆಯ ಮೂಲಕ ಮಾನವೀಯ ಗುಣಗಳನ್ನ ಪ್ರತಿಪಾದಿಸಿದವರು. ಕುಲ ಕುಲವೆಂದು ಬಡಿದಾಡದಿರಿ ನಿಮ್ಮ ಕುಲವ ನೆಲೆಯನೇನಾದರೂ ಬಲ್ಲಿರಾ ಎನ್ನುವಂತಹ ಹಲವಾರು ದಾಸ ಪದಗಳನ್ನು ಹಾಡುವ ಮೂಲಕ ಜನರಿಗೆ ಜೀವನದ ಸಾರವನ್ನ ಹೇಳಿ ಬದುಕುವ ದಾರಿಯನ್ನು ಹೇಳಿಕೊಟ್ಟಿದ್ದಾರೆ ಎಂದರು

ಅವರು ಪರಿವರ್ತನೆಯ ಹರಿಕಾರರಾಗಿದ್ದಾರೆ. ರಾಜ ಪಟ್ಟವನ್ನು ಬಿಟ್ಟು ದಾಸರಾದ ಇವರು ಸಮಾನತೆ ಮತ್ತು ಸತ್ಯವನ್ನು ಸಾರುತ್ತಾ ಕನ್ನಡ ನಾಡಿನ ದಾಸ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ ಕೊಟ್ಟ ತತ್ವಜ್ಞಾನಿ. ಕನಕದಾಸರ ಸಾಹಿತ್ಯ, ತ್ರಿಪದಿಗಳನ್ನ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕನಕದಾಸರ ನೆನಪಿಗಾಗಿ ಕಾಗಿನಲೆಯಲ್ಲಿ ಸ್ಮಾರಕ ನಿರ್ಮಾಣ ಮಾಡಿದ್ದೇವೆ. ಇದರ ಜೊತೆಗೆ ಸೊಂಗಳ್ಳಿ ರಾಯಣ್ಣ ಸಮಾಧಿ ಅಭಿವೃದ್ಧಿ ಮಾಡುತ್ತಿದ್ದು ಮ್ಯೂಸಿಯಂ ಕಟ್ಟಲಾಗುತ್ತಿದೆ. ರಾಯಣ್ಣನ ಹೆಸರಿನಲ್ಲಿ ಸೈನಿಕ ಶಾಲೆಯನ್ನ‌ ಮಾಡುತ್ತಿದ್ದು ಅದಕ್ಕೆ 180 ಕೋಟಿ ಅಷ್ಟು ಖರ್ಚಾಗಿದ್ದು ಇಂದು 50‌ ಕೋಟಿ ಖರ್ಚು ಮಾಡಿ ಪೂರ್ಣ ಮಾಡಿದ್ದೇವೆ. ಕೇಂದ್ರದ ರಾಜ್ ನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದು ಶಿಸ್ತಿನ ಸಿಪಾಯಿ ಶಾಲೆಯನ್ನ ಪೂರ್ಣಗೊಳಿಸಿದ ನಂತರ ಡಿಫೆನ್ಸ್ ಡಿಪಾರ್ಟ್ಮೆಂಟ್ ತೆಗೆದುಕೊಳ್ಳಬೇಕೆಂಬ ಇಚ್ಚೆ ಕರ್ನಾಟಕ ಸರ್ಕಾರದ್ದು ಎಂದು ತಿಳಿಸಿದರು.

Edited By : Manjunath H D
PublicNext

PublicNext

22/11/2021 11:32 am

Cinque Terre

43.01 K

Cinque Terre

0

ಸಂಬಂಧಿತ ಸುದ್ದಿ