ಕೊಪ್ಪಳ: ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.
ರಾಜ್ಯೋತ್ಸವ ಪ್ರಶಸ್ತಿಯ ಸಂಕೀರ್ಣ ವಿಭಾಗದಲ್ಲಿ ಪ್ರಾಣೇಶ್‍ಗೆ ಪ್ರಶಸ್ತಿ ಬಂದಿದೆ. ಕಳೆದ ಮೂರು ದಶಕಗಳಿಂದ ಪ್ರಾಣೇಶ್ ಅವರು ಸಾಹಿತ್ಯ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. 'ಗಂಗಾವತಿ ಬೀಚಿ' ಎಂದೂ ಗುರುತಿಸಿಕೊಂಡಿರುವ ಅವರು ಹಾಸ್ಯ ಸಾಹಿತ್ಯದಲ್ಲಿ ಎತ್ತಿದ ಕೈ ಎನಿಸಿಕೊಂಡಿದ್ದಾರೆ. ಅನಿಸಿದ್ದು ಅನುಭವಿಸಿದ್ದು, ಪ್ರಾಣೇಶ್ ಪಯಣ, ನಗಿಸುವವನ ನೋವುಗಳು, ಪ್ರಾಣೇಶ್ ಪಂಚ್ ಸೇರಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ನನ್ನ ಕಾರ್ಯಕ್ರಮಗಳಿಗೆ ಆಗಮಿಸಿ ನಕ್ಕು ಆಶೀರ್ವಾದ ಮಾಡಿದ ಎಲ್ಲರಿಗೂ ಈ ಪ್ರಶಸ್ತಿ ಅರ್ಪಿಸುತ್ತೇನೆ ಎಂದು ಪ್ರಾಣೇಶ್ ಹೇಳಿದ್ದಾರೆ.
PublicNext
31/10/2021 10:50 pm