ಹೊಸದಿಲ್ಲಿ: ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ಬುಧವಾರ ದಸರಾ ಕಾರ್ಯಕ್ರಮದ ವೇಳೆ ರಾವಣನ ಪ್ರತಿಕೃತಿ ದಹನದ ವೇಳೆ ಅವಘಡವೊಂದು ನಡೆದಿದೆ.ಸದ್ಯ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ವಿಡಿಯೋದಲ್ಲಿ ಗಮನಿಸುವಂತೆ ಪೌರಾಣಿಕ ರಾಕ್ಷಸ ರಾಜ ರಾವಣನ ಪ್ರತಿಕೃತಿಗಳನ್ನು ದಹಿಸುವ ಮೂಲಕ ಆಚರಿಸಲಾಗುವ ದಸರಾವನ್ನು ವೀಕ್ಷಿಸಲು ಸಾಕಷ್ಟು ಜನ ನೆರೆದಿದ್ದರು.
ಈ ವೇಳೆ ರಾವಣನ ಪ್ರತಿಕೃತಿಗೆ ಹಚ್ಚಿದ ಬೆಂಕಿ ಕಿಡಿಗಳು ನೆರೆದಿದ್ದ ಜನರ ಮೇಲೆ ಹಾರಿ ಬರುವುದನ್ನು ಕಾಣಬಹುದು. ಈ ವೇಳೆ ಸಾರ್ವಜನಿಕರು ಮಾತ್ರವಲ್ಲದೆ ಕಾರ್ಯಕ್ರಮದ ಕಾವಲಿಗೆ ಬಂದಿದ್ದ ಪೊಲೀಸ್ ಅಧಿಕಾರಿಗಳು ಕೂಡ ರಕ್ಷಣೆಗಾಗಿ ಓಡುವುದನ್ನು ಕಾಣಬಹುದು.
PublicNext
06/10/2022 10:59 am