ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿ : ರಾಷ್ಟ್ರ ಧ್ವಜದಿಂದ ದ್ವಿ ಚಕ್ರ ವಾಹನ ಸ್ವಚ್ಛತೆ, ನೆಟ್ಟಿಗರಿಂದ ವ್ಯಕ್ತಿ ಅಂದರ್ !

ದೆಹಲಿ : ರಾಷ್ಟ್ರಕ್ಕೆ ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದು ಪ್ರತಿ ಭಾರತೀಯನ ಆದ್ಯ ಕರ್ತವ್ಯ ಇದನ್ನು ವ್ಯಕ್ತಿ ಕುಟುಂಬ ಶಾಲಾ ಆರಂಭದ ದಿನದಂದಲೇ ಹೇಳಿ ಕೊಡಲಾಗುತ್ತದೆ.

ಹೀಗಿದ್ದರೂ, ಭಾರತದ ತ್ರಿವರ್ಣ ಧ್ವಜಕ್ಕೆ ಯಾರೇ ಆಗಲಿ ಯಾವುದೇ ಅಗೌರವ ಅಥವಾ ತಿರಸ್ಕಾರ ತೋರಿದರೆ ಮೂರು ವರ್ಷದವರೆಗೆ ಜೈಲು ಶಿಕ್ಷೆ ಆಗಬಹುದು.

ಸದ್ಯ ಈಶಾನ್ಯ ದೆಹಲಿಯ ಭಜನ್ಪುರ ಪ್ರದೇಶದಲ್ಲಿ 52 ವರ್ಷದ ವ್ಯಕ್ತಿಯೊಬ್ಬ ರಾಷ್ಟ್ರಧ್ವಜಕ್ಕೆ ಅಗೌರವ ತೋರಿರುವ ಘಟನೆ ಎಲ್ಲೇಡೆ ವೈರಲ್ ಆಗಿದೆ‌.

ದ್ವಿ ಚಕ್ರ ವಾಹನವನ್ನು ಸ್ವಚ್ಛಗೊಳಿಸಲು ಉತ್ತರ ಘೋಂಡಾ ಪ್ರದೇಶದ ನಿವಾಸಿ ರಾಷ್ಟ್ರಧ್ವಜ ಬಳಸಿದ್ದಾನೆ,

ವ್ಯಕ್ತಿ ಮಡಿಚಿದ ಧ್ವಜದಿಂದ ತನ್ನ ಸ್ಕೂಟರ್ ಸ್ವಚ್ಛಗೊಳಿಸುವ ಮತ್ತು ಧೂಳು ಹೊಡೆಯುತ್ತಿರುವ ದೃಶ್ಯ ಸ್ಥಳೀಯರು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರು.

ಬಳಿಕವಷ್ಟೇ ಈ ವಿಚಾರ ಬೆಳಕಿಗೆ ಬಂದಿದ್ದು, ಆತನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಈ ವೀಡಿಯೊ ನೆಟ್ಟಿಗರಿಂದ ವೈರಲ್ ಆದ ನಂತರ ದೆಹಲಿ ಪೊಲೀಸರು ಆತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Edited By :
PublicNext

PublicNext

09/09/2022 03:13 pm

Cinque Terre

130.29 K

Cinque Terre

19

ಸಂಬಂಧಿತ ಸುದ್ದಿ