ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಮಹಿಳೆಯಿಂದ ಅಕ್ರಮವಾಗಿ ಮದ್ಯ ಮಾರಾಟ- 27 ಸಾವಿರ ಮೌಲ್ಯದ ಮದ್ಯ ವಶ

ಗದಗ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ಗದಗದಲ್ಲಿ ನಡೆದಿದೆ‌.

ಗದಗದ ಬೆಟಗೇರಿಯ ಮಂಜುನಾಥ ನಗರ ನಿವಾಸಿ ತುಳಸಿ ಉರ್ಫ ಈರಮ್ಮ ಕೆಂಚೆ ಎಂಬ ಮಹಿಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಳು. ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿಯ ವೇಳೆ 27,760 ರೂಪಾಯಿ ಮೌಲ್ಯದ 62.28 ಲೀಟರ್ ಮದ್ಯ ಹಾಗೂ 1700 ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಅಬಕಾರಿ ಡಿಸಿ ಭರತೇಶ್ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ. ಈ ಕುರಿತು ಗದಗ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

ಅಬಕಾರಿ ಉಪ ನಿರೀಕ್ಷಕರು ಗದಗ ವಲಯ ಎ ರವಿಂದ್ರ, ಅಬಕಾರಿ ಕಾನ್ಸ್‌ಟೇಬಲ್‌ಗಳ ಗಿರೀಶ್ ಮುದ್ದರಡ್ಡಿ, ನಜೀರದ ಸಾಬ್ ಕುದಾವಂದ, ಮಂಜುನಾಥ ಅಂಬೋಜಿ, ಭಾರತಿ, ಸವೀತಾ ಭಾಗಿಯಾಗಿದ್ದರು.

Edited By : Vijay Kumar
PublicNext

PublicNext

04/09/2022 07:56 pm

Cinque Terre

36.01 K

Cinque Terre

2

ಸಂಬಂಧಿತ ಸುದ್ದಿ