ಮೊರೆನಾ: ಕ್ಷುಲ್ಲಕ ಕಾರಣಕ್ಕೆ ಯುವತಿಯರಿಬ್ಬರು ಕೋಚಿಂಗ್ ಸೆಂಟರ್ ಮುಂದೆ ಹೊಡೆದಾಡಿಕೊಂಡಿದ್ದಾರೆ.
ಮಧ್ಯ ಪ್ರದೇಶದ ಮೊರೆನಾ ನಗರದಲ್ಲಿ ಈ ಘಟನೆ ನಡೆದಿದೆ. ಜಡೆ ಎಳೆದಾಡಿದ ಯುವತಿಯರು ನೆಲಕ್ಕೆ ಬಿದ್ದು ಹೊಡೆದಾಡಿಕೊಂಡಿದ್ದಾರೆ. ಇವರಿಬ್ಬರ ಈ ಬೀದಿ ಕಾಳಗ ನೋಡಲು ಸುತ್ತಲೂ ನೂರಾರು ಜನ ಜಮಾಯಿಸಿದ್ದಾರೆ. ಅದರಲ್ಲಿ ಕೆಲವರು ಇವರ ಜಗಳ ಬಿಡಿಸಲು ಯತ್ನಿಸಿದ್ದಾರೆ. ಆದರೂ ಒಬ್ಬರಿಗೊಬ್ಬರನ್ನು ಎಳೆದಾಡಿ, ತಳ್ಳಾಡಿ ಬಡಿದಾಡಿದ ಯುವತಿಯರು ತಮ್ಮ ಕಾಳಗ ಮುಂದುವರೆಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
PublicNext
02/09/2022 04:39 pm