ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದಿ ನಾಯಿಗಳ ಮೇಲೆ ಆಸಿಡ್ ಹಾಕಿದ ದುಷ್ಟ: ದೈನೇಸಿ ಶುನಕಗಳು ಬದುಕೋದೇ ಕಷ್ಟ

ರಾಯ್‌ಪುರ: ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸುವ ಸಂಸ್ಕೃತಿ ನಮ್ಮದು. ಆದರೂ ನಮ್ಮ ನಡುವೆ ಇರುವ ಕೆಲವು ಕಿಡಿಗೇಡಿಗಳು ಅಮಾನವೀಯ ಕೃತ್ಯ ಎಸಗುತ್ತಲೇ ಇರುತ್ತಾರೆ‌.

ಬೀದಿ ನಾಯಿಗಳು ತಮ್ಮ ಪಾಡಿಗೆ ತಾವು ಬದುಕಿರುತ್ತವೆ. ಮನೆ ನಾಯಿ ಮನೆಯನ್ನಷ್ಟೇ ಕಾದರೆ ಬೀದಿ ನಾಯಿಗಳು ಓಣಿಯ ಎಲ್ಲ ಮನೆಗಳನ್ನು ಕಾಯುತ್ತವೆ. ಮನುಷ್ಯ ರೂಪದ ಕಿರಾತಕನೊಬ್ಬ ಬೀದಿ ನಾಯಿಗಳ ಮೇಲೆ ಆಸಿಡ್ ಹಾಕಿದ್ದಾನೆ. ಛತ್ತೀಸ್‌ಗಡದ ರಾಯ್‌ಪುರದಲ್ಲಿ ಈ ಘಟನೆ ನಡೆದಿದೆ. ಆಸಿಡ್ ಹಾಕಿದ ಯುವಕ ಸೈನೂರ್ ಹುಸೇನ್ ಮಲಿಕ್ ಎಂದು ತಿಳಿದು ಬಂದಿದೆ‌. ತನಗೆ ತೊಂದರೆ ಆಗುತ್ತಿದೆ ಎಂಬ ಕಾರಣಕ್ಕೆ ಸೈನೂರ್ ಹುಸೇನ್ ನಾಯಿಗಳ ಮೇಲೆ ಆಸಿಡ್ ಹಾಕಿದ್ದಾನೆ. ಸದ್ಯ ನಾಯಿಗಳ ಸ್ಥಿತಿ ಚಿಂತಾಜನಕವಾಗಿದೆ.

Edited By : Manjunath H D
PublicNext

PublicNext

01/09/2022 08:01 pm

Cinque Terre

52.65 K

Cinque Terre

4

ಸಂಬಂಧಿತ ಸುದ್ದಿ