ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಕ್ಕೇರಿ: ತಾನು ಪೋಲಿಸ್ ಎಂದು ನಂಬಿಸಿ ಚಿನ್ನಾಭರಣ ಎಗರಿಸಿದ್ದ ಆರೋಪಿ ಅಂದರ್

ಹುಕ್ಕೇರಿ: ಬಂಧಿತನನ್ನು ಮಹಾರಾಷ್ಟ್ರದ ಸಾಂಗ್ಲಿಯ ಮಹಮ್ಮದ್ ಯುಸುಫ್ ಇರಾನಿ ಎಂದು ಗುರುತಿಸಲಾಗಿದೆ. ಇತ್ತಿಚ್ಚೆಗೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ವಿಜಯಲಕ್ಷ್ಮೀ ರಾಜು ಚೌಗಲೆ ಎಂಬ ಮಹಿಳೆಗೆ ತಾನೂ ಪೋಲಿಸ್ ಎಂದು ನಂಬಿಸಿ ಗಮನ ಬೇರೆ ಕಡೆ ಸೆಳೆದು 1.5 ಲಕ್ಷ ರೂ. ಬೆಲೆಯ ಚಿನ್ನಾಭರಣ ಕದ್ದು ಪರಾರಿಯಾಗಿದ್ದ.

ಪ್ರಕರಣ ದಾಖಲಿಸಿಕೊಂಡ ಪೋಲಿಸರು ಎಸ್ಪಿ ಸಂಜೀವ ಪಾಟೀಲ‌ ಹಾಗೂ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್ಐ ಜಿ.ಬಿ.ಕೊಂಗನೋಳಿ, ಸಿಬ್ಬಂದಿಗಳು ಒಳಗೊಂಡಿರುವ ವಿಶೇಷ ತಂಡ ರಚಿಸಿ ಕಳ್ಳನ ಪತ್ತೆಗೆ ಜಾಲ‌ ಬಿಸಿದ್ದರು. ನಿನ್ನೆ ಆರೋಪಿ ಪತ್ತೆಯಾಗಿದ್ದಾನೆ. ಸಂಶಯುಕ್ತವಾಗಿ ಸಿಕ್ಕ ವ್ಯಕ್ತಿಯನ್ನು ವಿಚಾರಣೆಗೆ ಒಳ ಪಡಿಸಿದಾಗ ಆರೋಪಿ ತಪ್ಪು ಒಪ್ಪಿಕೊಂಡಿದ್ದು, ನನ್ನೊಂದಿಗೆ ಇನ್ನೂ ಮೂರು ಜನರು ಸೇರಿ ಸಂಕೇಶ್ವರ ಪಟ್ಟಣ ಸೇರಿದಂತೆ ನಿಪ್ಪಾಣಿ, ಗೋಕಾಕ , ಮತ್ತು ಮಹಾರಾಷ್ಟ್ರದ ಗಡಹಿಂಗ್ಲಜಗಳಲ್ಲಿ ಇಂತಗ ಕೃತ್ಯ ಎಸಗಿರುವ ಕುರಿತು ಒಪ್ಪಿಕೊಂಡಿದ್ದಾನೆ.

ಆರೋಪಿತನಿಂದ 10 ಗ್ರಾಮ ಜಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ 01 ಮೋಟಾರ ಸೈಕಲ್ ಹಾಗೂ ಒಂದು ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Abhishek Kamoji
PublicNext

PublicNext

01/09/2022 03:22 pm

Cinque Terre

25.11 K

Cinque Terre

0

ಸಂಬಂಧಿತ ಸುದ್ದಿ