ಅಥಣಿ: ಅನಾರೋಗ್ಯದಿಂದ ಪತ್ನಿ ಸಾವನ್ನಪ್ಪಿದ ಎರಡೇ ದಿನದಲ್ಲಿ ಮನನೊಂದು ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮ ಸದಾಶಿವ ರಾಮಪ್ಪ ಕಾಂಬಳೆ (26) ಮನೆಯಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಸಹ ಬೆಂಕಿಯ ಕೆನ್ನಾಲಗೆಗೆ ಅವರ ದೇಹ ಶೇಕಡಾ 80ರಷ್ಟು ಸುಟ್ಟು ಹೋಗಿದ್ದರಿಂದ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸದಾಶಿವ ಸಾವನ್ನಪ್ಪಿದ್ದಾರೆ.
ಇನ್ನು ಕೇವಲ ಎರಡು ದಿನಗಳ ಹಿಂದಷ್ಟೆ ಸದಾಶಿವ ಪತ್ನಿ ರೂಪಾ ಕಾಂಬಳೆ ಅನಾರೋಗ್ಯದಿಂದ ನಿಧನರಾಗಿದ್ದರು. ಇದರಿಂದ ಮನನೊಂದಿದ್ದ ಪತಿ ಸದಾಶಿವ ಅಸತ್ಮಹತ್ಯೆಗೆ ಯತ್ನಸಿದ್ದರು. ಇನ್ನು ಈ ಜೋಡಿಗೆ ಮದುವೆಯಾಗಿ ಕೇವಲ ಎರಡೇ ವರ್ಷವಾಗಿತ್ತು ಬಾಳಿ ಬದುಕಬೇಕಿದ್ದ ಜೋಡಿಗಳ ಬದುಕಲ್ಲಿ ವಿಧಿ ತನ್ನ ಕ್ರೂರ ಆಟವಾಡಿದ್ದು ಪತಿ ಪತ್ನಿಯ ಸಾವಿನಿಂದ ಇಡೀ ಝುಂಜರವಾಡ ಗ್ರಾಮವೇ ಮಮ್ಮಲ ಮರುಗುತ್ತಿದೆ.
ಈ ಕುರಿತು ಐಗಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
26/08/2022 10:18 am