ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ವೀರ ಸಾವರ್ಕರ್, ತಿಲಕ್‌ರ ಫ್ಲೆಕ್ಸ್ ಭಾವಚಿತ್ರ ಹರಿದು ಹಾಕಿದ ದುಷ್ಕರ್ಮಿಗಳು

ದಾವಣಗೆರೆ: ಗಣೇಶೋತ್ಸವ ಹಿನ್ನೆಲೆಯಲ್ಲಿ ಹೊನ್ನಾಳಿ ಪಟ್ಟಣದಲ್ಲಿ ಅಳವಡಿಸಲಾಗಿದ್ದ ವೀರ ಸಾವರ್ಕರ್ ಹಾಗೂ ಬಾಲಗಂಗಾಧರ ತಿಲಕ್ ಅವರ ಫ್ಲೆಕ್ಸ್ ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ ಘಟನೆ ನಡೆದಿದೆ. ಇದು ಹಿಂದೂ ಮಹಾಸಭಾ ಕೆರಳುವಂತೆ ಮಾಡಿದೆ. ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದೆ.

ಹೊನ್ನಾಳಿ ಪಟ್ಟಣದ ಟಿ. ಬಿ. ಸರ್ಕಲ್ ಬಳಿಯಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹಿಂದೂ ಮಹಾಸಭಾದಿಂದ ಫ್ಲೆಕ್ಸ್ ಹಾಗೂ ಭಾವಚಿತ್ರ ಹಾಕಲಾಗಿತ್ತು. ಆದರೆ ರಾತ್ರೋರಾತ್ರಿ ದುಷ್ಕರ್ಮಿಗಳು ವೀರ ಸಾವರ್ಕರ್ ಹಾಗೂ ಬಾಲಗಂಗಾಧರ ತಿಲಕ್ ಅವರ ಭಾವಚಿತ್ರ ಹಾಗೂ ಫ್ಲೆಕ್ಸ್ ಹರಿದು ಹಾಕಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹಿಂದೂ ಮಹಾಸಭಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ಬೀದಿಗಳು, ರಸ್ತೆಗಳಲ್ಲಿಯೂ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್, ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಶುರು ಮಾಡಿದ ಬಾಲಗಂಗಾಧರ ತಿಲಕ್‌ರ ಭಾವಚಿತ್ರಗಳು ಹಾಗೂ ಫ್ಲೆಕ್ಸ್ ಗಳನ್ನು ಹಾಕುತ್ತೇವೆ. ಅದು ಹೇಗೆ ಇವುಗಳನ್ನು ಹರಿದು ಹಾಕುತ್ತಾರೆ ಎಂಬುದನ್ನ ನಾವು ನೋಡುತ್ತೇವೆ. ಗಾಳಿಗೆ ಬಿದ್ದಿದ್ದರೆ ಕೆಳಗೆ ಬೀಳಬೇಕಿತ್ತು. ಆದರೆ ದುಷ್ಕರ್ಮಿಗಳ ಕೃತ್ಯ ಇದು. ಹೊನ್ನಾಳಿಗೆ ಕೆಟ್ಟ ಹೆಸರು ತರುವ ಷಡ್ಯಂತ್ರ

ನಡೆದಿದೆ ಎಂದು ಹಿಂದೂ ಮಹಾಸಭಾ ಕಾರ್ಯಕರ್ತರು ಆರೋಪಿಸಿದ್ದಾರೆ.

Edited By : Shivu K
PublicNext

PublicNext

24/08/2022 08:50 pm

Cinque Terre

59.92 K

Cinque Terre

14

ಸಂಬಂಧಿತ ಸುದ್ದಿ