ದಾವಣಗೆರೆ: ದರೋಡೆಗೆ ಹೊಂಚು ಹಾಕಿದ್ದ ಐವರು ಆರೋಪಿಗಳ ಪೈಕಿ ಒಬ್ಬನನ್ನು ದಾವಣಗೆರೆ-ಚನ್ನಗಿರಿ ರಸ್ತೆಯ ಕೈದಾಳೆ ತಿರುವಿನಲ್ಲಿ ಹದಡಿ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 3.02 ಲಕ್ಷ ರೂಪಾಯಿ ನಗದು, ಕಾರು ಹಾಗೂ ಲಾಂಗ್ ಸೇರಿದಂತೆ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ತಿಮ್ಲಾಪುರ ಕ್ಯಾಂಪ್‌ನ ಸಾಧಿಕ್ ವುಲ್ತಾ ಅಲಿಯಾಸ್ ರಾಜೀಕ್ (23) ಬಂಧಿತ ಆರೋಪಿ. ಉಳಿದ ಆರೋಪಿಗಳು ಪರಾರಿಯಾಗಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕೈದಾಳೆಕಡೆ ಹೋಗುವ ರಸ್ತೆಯ ಸಮೀಪ ಇನೋವಾ ಕಾರಿನ ಬಳಿ ನಿಂತಿದ್ದಾಗ ಪೊಲೀಸರು ಸಾದಿಕ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರೋಡೆಗೆ ಸ್ಕೆಚ್ ಹಾಕುತಿದ್ದದ್ದು ಬೆಳಕಿಗೆ ಬಂದಿದೆ. ಬಂಧಿತ ಆರೋಪಿಯು 2 ಜಾನುವಾರು ಕಳ್ಳತನ, ಬಿಳಚೋಡು ವ್ಯಾಪ್ತಿಯಲ್ಲಿ 2, ಮಾಯಕೊಂಡದಲ್ಲಿ 1 ಪ್ರಕರಣ ಸೇರಿ 5 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯ ವೇಳೆ ತಿಳಿದು ಬಂದಿದೆ. ಹಣದ ಜೊತೆಗೆ ಲೈಲ್ಯಾಂಡ್, ಇನ್ನೋವಾ ಕಾರು, ಲಾಂಗ್, ಮಚ್ಚು, ಕಬ್ಬಿಣದ ಸಲಾಕೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
PublicNext
20/08/2022 08:08 pm