ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಧಿ ಎಂದು ನಂಬಿಸಿ ಹೂತಿಟ್ಟ ವಿಗ್ರಹ ತೋರಿಸಿ ಮೋಸ: ಕಳ್ಳ ಸ್ವಾಮಿ ನಾಪತ್ತೆ

ಹಾಸನ: ನಿಮ್ಮ ಮನೆಯ ತೋಟದಲ್ಲಿ ನಿಧಿ ಇದೆ ಎಂದು ಆಸೆ ತೋರಿಸಿದ ಕಳ್ಳ ಸ್ವಾಮೀಜಿಯೊಬ್ಬ ತಾನೇ ಹೂತಿಟ್ಟ ನಕಲಿ ವಿಗ್ರಹ ತೆಗೆದು ತೋರಿಸಿ ಮೋಸ ಮಾಡಿದ್ದಾ‌ನೆ. ಅಸಲಿಯತ್ತು ಗೊತ್ತಾಗುತ್ತಿದ್ದಂತೆ ಆತ ಕಾಲ್ಕಿತ್ತಿದ್ದಾನೆ‌. ಈಗ ಪೊಲೀಸರು ಆತನನ್ನು ಹುಡುಕಾಡುತ್ತಿದ್ದಾರೆ.

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ದೊಡ್ಡಹಳ್ಳಿ ಗ್ರಾಮದ‌ ಮಂಜುನಾಥ್ ಎಂಬಾತನೇ ಕಳ್ಳ ಸ್ವಾಮೀಜಿಯಾಗಿದ್ದು ಈತ ಗ್ರಾಮದ ಹಲವರಿಗೆ ಇದೇ ರೀತಿ ಮೋಸ ಮಾಡಿ ಹಣ ಪೀಕಿದ್ದಾನೆ. ಕಬ್ಬಿಣದ ವಿಗ್ರಹಕ್ಕೆ ಬಂಗಾರ ಬಣ್ಣದ‌ ಲೇಪನ ಹಚ್ಚಿ ಅದನ್ನು ತಾನೇ ಹೂತಿಡುತ್ತಿದ್ದ ಎನ್ನಲಾಗಿದೆ. ನಂತರ ನಿಮ್ಮ ಜಾಗದಲ್ಲಿ ನಿಧಿ ಎಂದು ನಂಬಿಸಿ ಹೂತಿಟ್ಟ ವಿಗ್ರಹ ತೆಗೆದು ಜನರಿಗೆ ಮೋಸ ಮಾಡುತ್ತಿದ್ದ ನಂತರ ಅವರಿಂದ ಹಣ ವಸೂಲಿ ಮಾಡುತ್ತಿದ್ದ. ಇದೇ ರೀತಿ ಹಲವರಿಗೆ ಟೋಪಿ ಹಾಕಿ ಸುಮಾರು ₹5 ಲಕ್ಷವರೆಗೆ ಹಣ ಪೀಕಿದ್ದಾನೆ. ತನ್ನ ಅಸಲಿಯತ್ತು ಗೊತ್ತಾದ ಕೂಡಲೇ ನಕಲಿ ಸ್ವಾಮಿ ಮಂಜುನಾಥ ಪರಾರಿಯಾಗಿದ್ದಾನೆ‌. ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Edited By : Nagaraj Tulugeri
PublicNext

PublicNext

18/08/2022 06:36 pm

Cinque Terre

36.99 K

Cinque Terre

2

ಸಂಬಂಧಿತ ಸುದ್ದಿ