ಗುವಾಹಟಿ: 500 ರೂ.ಗಾಗಿ ವ್ಯಕ್ತಿಯೋರ್ವ ಮಚ್ಚಿನಿಂದ ತನ್ನ ಸ್ನೇಹಿತನ ಶಿರಚ್ಛೇದನ ಮಾಡಿ ಪೊಲೀಸ್ ಠಾಣೆಗೆ ತೆರಳಿದ ಆಘಾತಕಾರಿ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಸೋನಿತ್‍ಪುರ ಜಿಲ್ಲೆಯ ರಂಗಪಾರದ ದಯಾಲ್‍ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತುನಿರಾಮ್ ಮಾದ್ರಿ(40) ಕೋಪದ ಭರದಲ್ಲಿ ತನ್ನ ಸ್ನೇಹಿತ ಬ್ರೈಲರ್ ಹೆಮ್ರೋಮ್‍ನ ತಲೆಯನ್ನು ಮಚ್ಚಿನಿಂದ ಕತ್ತರಿಸಿ ನಂತರ ರಂಗಪಾರ ಪೊಲೀಸ್ ಠಾಣೆಗೆ ತೆರಳಿದ್ದಾನೆ.
ಗ್ರಾಮದಲ್ಲಿ ನಡೆಯುತ್ತಿದ್ದ ಫುಟ್‍ಬಾಲ್ ಪಂದ್ಯಾವಳಿಯ ಫೈನಲ್‍ನ್ನು ವೀಕ್ಷಿಸಲು ಹೆಮ್ರಾನ್‍ನು ಮಾದ್ರಿ ಬಳಿ 500 ರೂ. ಸಾಲವನ್ನು ಕೇಳಿದ್ದನು. ಆದರೆ ಆರೋಪಿ ಮಾದ್ರಿ ಹಣವನ್ನು ನೀಡಲು ನಿರಾಕರಿಸಿದ್ದ. ಈ ಹಿನ್ನೆಲೆಯಲ್ಲಿ ಹೆಮ್ರಾನ್ ಬೆದರಿಕೆಯನ್ನು ಹಾಕಿದ್ದ. ಇದಾದ ಬಳಿಕ ಈ ವಿಷಯಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿತ್ತು. ಇನ್ನು ಊಟಕ್ಕೆ ಮೇಕೆ ಕಡಿಯುವ ನೆಪದಲ್ಲಿ ಮಾದ್ರಿಯು ಹೆಮ್ರೋಮ್‍ನ ತಲೆ ಕತ್ತರಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
PublicNext
17/08/2022 07:20 am