ರಾಜಸ್ಥಾನ: ಮುಸ್ಲಿಂ ಯುವತಿ ಹಿಂದೂ ಯುವಕನನ್ನ ಪ್ರೀತಿಸಿದ್ದಳು. ಮನೆಯವರ ವಿರೋಧದ ಮಧ್ಯ ಮದುವೆ ಕೂಡ ಆಗಿದ್ದಳು. ಇದಕ್ಕೆ ಆಕ್ರೋಶಕೊಂಡಿದ್ದ ಮುಸ್ಲಿಂ ತಂದೆ,ಮಗಳು ಮತ್ತು ಅಳಿಯ ರಸ್ತೆಯಲ್ಲಿ ನಡೆದು ಹೋಗುವಾಗ ಆಟೋ ಡಿಕ್ಕಿ ಹೊಡೆಸಿ ಹತ್ಯೆ ಮಾಡಲು ಪ್ರಯತ್ನಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನದ ಭರತ್ಪುರದಲ್ಲಿ ಈ ಒಂದು ಘಟನೆ ನಡೆದಿದ್ದು, ಯುವತಿ ತನ್ ಪತಿ ಜೊತೆಗೆ ಹೋಗುತ್ತಿದ್ದಳು. ಆಕೆಯನ್ನ ಹಿಂಬಾಲಿಸಿದ ತಂದೆ ಮಗಳಿಗೆ ಆಟೋ ಡಿಕ್ಕಿ ಹೊಡೆಸಲು ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್ ಮಗಳು ತಪ್ಪಿಸಿಕೊಂಡು ಓಡಿ ಹೋಗಿದ್ದಾಳೆ.
ಈ ಒಂದು ದೃಶ್ಯ ಸಿಸಿಟಿವಿಯಲ್ಲಿ ಕ್ಯಾಪ್ಚರ್ ಆಗಿದ್ದು ಮಗಳ ಈ ಮದುವೆಯನ್ನ ವಿರೋಧಿಸುತ್ತಲೇ ಬಂದಿರೊ ತಂದೆ, ಈ ಮೊದಲೂ ಇಂತಹ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪೊಲೀಸರು ಈಗ ಆರೋಪಿಯ ಬಂಧನಕ್ಕೆ ಮುಂದಾಗಿದ್ದಾರೆ.
PublicNext
05/08/2022 10:22 pm