ಪಾವಗಡ:ಕಳೆದ ನಾಲ್ಕೈದು ದಿನಗಳಿಂದ ತಾಲೂಕಿನಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ಇದರಿಂದ ತಾಲೂಕಿನ ವೈ.ಎನ್. ಹೊಸಕೋಟೆಯಲ್ಲಿನ ಶ್ರೀ ಸಾಯಿ ಎಂಟರ್ಪ್ರೈಸಸ್ ಪೆಟ್ರೋಲ್ ಬಂಕ್‌ನ ಪೆಟ್ರೋಲ್ ಟ್ಯಾಂಕ್ ಒಳಗಡೆ ನೀರು ಮಿಶ್ರಣವಾಗಿರೋ ಘಟನೆ ಇಂದು ಬೆಳಕಿಗೆ ಬಂದಿದೆ.
ಆಂಧ್ರದ ಕಮ್ಮದೂರು ಮೂಲದ ವ್ಯಕ್ತಿ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ತಮ್ಮ ಗ್ರಾಮಕ್ಕೆ ಮರಳಿ ಹೋಗುವ ಸಮಯದಲ್ಲಿ, ತಾನು ಹಾಕಿಸಿಕೊಂಡ ಪೆಟ್ರೋಲ್‌ನಲ್ಲಿ ನೀರು ಕಲಬೆರಿಕೆ ಆಗಿರುವುದು ಕಂಡು ಪೆಟ್ರೋಲ್ ಬಂಕ್ ಬಳಿ ವಾಪಸ್ ಬಂದು ವಿಚಾರಿಸಿದಾಗ ಈ ಸಂಗತಿ ಬೆಳಕಿಗೆ ಬಂದಿದೆ.
ಈ ಬಗ್ಗೆ ಪೆಟ್ರೋಲ್ ಬಂಕ್ ಮಾಲೀಕರನ್ನು ವಿಚಾರಿಸಿದಾಗ, ಹೌದು ಇತ್ತೀಚಿಗೆ ಬಾರಿ ಮಳೆ ಬರುತ್ತಿರೋದ್ರಿಂದ ಪೆಟ್ರೋಲ್ ಟ್ಯಾಂಕ್‌ನ ಒಳಗಡೆ ನೀರು ಸೇರಿಕೊಂಡರುವ ಬಗ್ಗೆ ಅನುಮಾನ ಇದೆ. ನಮ್ಮ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹೋಗಿರುವಂತಹ ಗ್ರಾಹಕರು ಮರಳಿ ಬಂದರೆ, ಅವರು ಹಾಕಿಸಿಕೊಂಡ ಪೆಟ್ರೋಲ್ ಮೊತ್ತವನ್ನು ವಾಪಸ್ ಕೊಡುತ್ತವೆ. ಹಾಗೂ ಆ ಪೆಟ್ರೋಲ್ ಹಾಕಿಸಿಕೊಂಡ ವಾಹನಕ್ಕೆ ಸಮಸ್ಯೆ ಉಂಟಾಗಿದ್ದರೆ,ಸಂಪೂರ್ಣ ರಿಪೇರಿ ವೆಚ್ಚ ಭರಿಸುತ್ತೇವೆ ಎಂದು ತಿಳಿಸಿದ್ದಾರೆ.
ಸದ್ಯ ವೈ.ಎನ್.ಹೊಸಕೋಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ತಾತ್ಕಾಲಿಕವಾಗಿ ಬಂಕ್‌ಅನ್ನು ಮುಚ್ಚಿಸಿದ್ದಾರೆ. ಒಟ್ಟಾರೆ ತಾಲೂಕಿನಾದ್ಯಂತ ಸದ್ಯ ಈ ಸುದ್ದಿ ವೈರಲ್ ಆಗಿದೆ.
ವರದಿ: ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್.
PublicNext
05/08/2022 08:13 pm