ವರದಿ- ಸಂತೋಷ ಬಡಕಂಬಿ.
ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳಿಬ್ಬರೂ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಅಥಣಿ ತಾಲೂಕಿನ ಬಳಿಗೇರಿ ಗ್ರಾಮ ಲೆಕ್ಕಾಧಿಕಾರಿ ಉಮೇಶ್ ದನದಮನಿ ಹಾಗೂ ಗ್ರಾಮ ಸಹಾಯಕ ಪ್ರಹ್ಲಾದ ಸನದಿ ಬಂಧಿತ ಆರೋಪಿಗಳು.
ರಾಯಭಾಗ ತಾಲೂಕಿನ ಗಣಪತಿ ಮೊನಪ್ಪ ಬಡಿಗೇರ ಸಾಹಾರೂಗೇರಿ ಎಂಬುವವರು ಬೆಳಗಾವಿ ಎಸಿಬಿ ಠಾಣೆಯಲ್ಲಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆರೋಪಿಗಳು ಆರಂಭದಲ್ಲಿ 8000 ರೂ ಗೆ ಲಂಚದ ಹಣಕ್ಕೆ ಬೇಡಿಕೆ ಇಟ್ಟು ಬಳಿಕ 3000 ರೂ. ಲಂಚದ ಹಣವನ್ನು ಮುಂಗಡವಾಗಿ ಪಡೆದಿದ್ದು ನಂತರದಲ್ಲಿ ಮತ್ತೆ 10,500 ಗಳಿಗೆ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಅಧಿಕಾರಿಗಳ ಲಂಚದಾಹಕ್ಕೆ ಬೇಸತ್ತು ಗಣಪತಿ ಮೊನಪ್ಪ ಎಸಿಬಿಯಲ್ಲಿ ದೂರು ದಾಖಲಿಸಿದ್ದರು. ದೂರು ದಾರದಿಂದ 10500 ರೂ. ಹಣವನ್ನು ಸ್ವೀಕರಿಸುವ ಸಂದರ್ಭದಲ್ಲಿ ಬೆಳಗಾವಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿದ್ದು, ಇಬ್ಬರು ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ.
ಅಲ್ಲದೇ ಬಳಿಗೇರಿ ಗ್ರಾಮ ಲೆಕ್ಕಾಧಿಕಾರಿಯ ಕಛೇರಿ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಗಿದ್ದು, ಗ್ರಾಮ ಸಹಾಯಕ ಪ್ರಹ್ಲಾದ ಸನದಿ ಬಳಿ 19000ರೂ ಪತ್ತೆಯಾಗಿದ್ದು, ಹಣವನ್ನು ಜಪ್ತಿ ಮಾಡಲಾಗಿದೆ.
ಭ್ರಷ್ಟಾಚಾರ ನಿಗ್ರಹ ದಳದ ಅಧೀಕ್ಷಕ ಬಿ.ಎಸ್. ನೇಮಗೌಡ ಉತ್ತರ ವಲಯ, ಬೆಳಗಾವಿ ರವರ ಮಾರ್ಗದರ್ಶನದಲ್ಲಿ ಪಿರ್ಯಾದಿಯವರು ಈ ಬಗ್ಗೆ ನೀಡಿದ ದೂರನ್ನು ಆಧರಿಸಿ ಜೆ.ಎಮ್. ಕರುಣಾಕರ ಶೆಟ್ಟಿ, ಪೊಲೀಸ್ ಉಪಾಧೀಕ್ಷಕರವರು ದಾಖಲಿಸಿಕೊಂಡಿದ್ದರು. ನಿರಂಜನ್ ಎಂ. ಪಾಟೀಲ ಪೊಲೀಸ ನಿರೀಕ್ಷಕರು, ಎ.ಎಸ್.ಗೂದಿಗೊಪ್ಪ, ಪೊಲೀಸ್ ನಿರೀಕ್ಷಕರು ಹಾಗೂ ಬೆಳಗಾವಿ ಎಸಿಬಿ ಠಾಣೆಯ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
PublicNext
04/08/2022 07:35 pm