ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಧುಗಿರಿ : ಖಾತೆ ಬದಲಾವಣೆಗೆ 3 ಸಾವಿರ ಲಂಚಕ್ಕೆ ಎಸ್ ಡಿ ಎ ಲಾಕ್

ಮಧುಗಿರಿ:- ಖಾತೆ ಬದಲಾವಣೆ ಮಾಡಿಕೊಡುವ ಸಲುವಾಗಿ ಲಂಚಕ್ಕೆ ಬೇಡಿಕೆಯಿಟ್ಟು ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ದಾಳಿಗೆ ಒಳಗಾಗಿರುವ ಘಟನೆ ಮಧುಗಿರಿ ಉಪವಿಭಾಗ ಕಚೇರಿಯ ಸಮೀಪ ಇರುವ ಟೀ ಸ್ಟಾಲ್ ನಲ್ಲಿ ಮಂಗಳವಾರ ನಡೆದಿದೆ.

ಶಿರಾ ತಾಲೂಕು ಬುಕ್ಕಾಪಟ್ಟಣ ವಾಸಿಯೊಬ್ಬರು ಸಿವಿಲ್ ನ್ಯಾಯಾಲ ಯದ ಡಿಗ್ರಿಯ ಆದೇಶದಂತೆ ಅವರ ತಂದೆ ಹೆಸರಿಗೆ ಶಿರಾ ತಾಲೂಕು ಮಾದೇನಹಳ್ಳಿ ಸರ್ವೆ ನಂಬರ್ 34/2 ರ ಜಮೀನಿನ ಖಾತೆಗಾಗಿ ಶಿರಾ ತಹಶೀಲ್ದಾರ್ ಕಚೇರಿಗೆ ಮನವಿ ಕೊಟ್ಟಿದ್ದರು, ಅದರಂತೆ ಕಡತವು ಶಿರಾ ತಾಲೂಕು ಕಚೇರಿಯಿಂದ ಮಧುಗಿರಿ ಎಸಿ ರವರ ಕಚೇರಿಯಲ್ಲಿ ಸ್ವೀಕೃತವಾಗಿತ್ತು, 2022 ರ ಜೂಲೈ 20 ರಂದು ಉಪ ವಿಭಾಗಾಧಿಕಾರಿ ರವರ ಕಚೇರಿ ಎಸ್.ಡಿ.ಎ ಆದ ಎಲ್. ಮೋಹನ್‌ಕುಮಾರ್‌ ಸದರಿ ಜಮೀನಿನ ಖಾತೆ ಮಾಡಿಸಿ ಕೊಡುವ ಸಲುವಾಗಿ ಪಿರಾದಿ ರವರಿಗೆ 3 ಸಾವಿರ ರೂ ಲಂಚದ ಬೇಡಿಕೆ ಈ ಬಗ್ಗೆ ಪಿರಾದಿ ರವರು ನೀಡಿದ್ದ ದೂರಿನನ್ವಯ ತುಮಕೂರು ಎಸಿಬಿ ಪೊಲೀಸ್ ಮನೆಯಲ್ಲಿ ಪ್ರಕರಣ ದಾಖಲಾಗಿತ್ತು, ಮಂಗಳವಾರ ನಡೆಸಿದ ಟ್ರಾಪ್ ಕಾರ್ಯಚರಣೆಯಲ್ಲಿ ಆರೋಪಿತ ಮೋಹನ್‌ಕುಮಾರ್ ಎಲ್ ಮಧುಗಿರಿ ಟೌನ್‌ನ ಸಿವಿಲ್ ಬಸ್ಟಾಂಡ್ ನಲ್ಲಿರುವ ಮಾರುತಿ ಟೀ ಸ್ಟಾಲ್ ಬಳಿ ಪಿರಾದಿ ರವರಿಂದ 3 ಸಾವಿರ ರೂ ಲಂಚದ ಹಣವನ್ನು ಪಡೆಯುವಾಗ ತುಮಕೂರು ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ದಾಳಿ ನಡೆಸಿ ಲಂಚದ ಹಣದ ಸಹಿತ ಆರೋಪಿ ಯನ್ನು ವಶಕ್ಕೆ ಪಡೆದು , ದಸ್ತಗಿರಿ ಮಾಡಿ ತನಿಖೆ ಕೈಗೊಂಡಿರುತ್ತಾರೆ.

ಭ್ರಷ್ಟಾಚಾರ ನಿಗ್ರಹದಳ , ಕೇಂದ್ರವಲಯದ ಪೊಲೀಸ್ ಅಧೀಕ್ಷಕರಾದ ಡಾ. ಶೋಭಾರಾಣಿ , ಐಪಿಎಸ್ ರವರ ಮಾರ್ಗದರ್ಶನದಲ್ಲಿ ತುಮಕೂರು ಎಸಿಬಿ ಘಟಕದ ಡಿ.ವೈಎಸ್‌ಪಿ ಮಲ್ಲಿಕಾರ್ಜುನ ಚುಕ್ಕಿ ಎಸ್ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ವೀರೇಂದ್ರ ಎನ್ , ವಿಜಯಲಕ್ಷ್ಮಿ ಎಸ್ ಹಾಗೂ ಸಿಬ್ಬಂದಿ ಗಳಾದ ಡಿ. ನರಸಿಂಹ ರಾಜು, ಮೋಹನ್‌ ಕುಮಾರ್‌ ಎಂ . ಶಿವಣ್ಣ ಕೆ.ಪಿ. ಚಂದ್ರಶೇಖರ್ ಎಂ . ಎಲ್.ನರಸಿಂಹರಾಜು , ಗಿರೀಶ್ ಕುಮಾರ್ ಟಿ.ಎಸ್ . ಯಶೋಧ , ರಮೇಶ್ , ಮಹೇಶ್‌ ಕುಮಾರ್ ರವರು ದಾಳಿಯಲ್ಲಿ ಇದ್ದರು.

Edited By : Nirmala Aralikatti
PublicNext

PublicNext

26/07/2022 08:15 pm

Cinque Terre

30.41 K

Cinque Terre

0

ಸಂಬಂಧಿತ ಸುದ್ದಿ