ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉದ್ಯಮಿ ಮನೆಯಲ್ಲಿ 1 ಗಂಟೆವರೆಗೆ ಪಟಾಕಿಗಳ ಸ್ಫೋಟ; ಕುಸಿದ ಮನೆ, 6 ಜನ ಸಾವು

ಪಾಟ್ನಾ: ಮನೆಯೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು ಸ್ಫೋಟದ ಪರಿಣಾಮ ಮನೆ ಕುಸಿದು 6 ಜನ ಮೃ ಪಟ್ಟ ಘಟನೆ ಬಿಹಾರದ ಸರನ್ ಜಿಲ್ಲೆಯ ಛಾಪ್ರಾ ಪಟ್ಟಣದಲ್ಲಿ ನಡೆದಿದೆ.

ನಗರದ ಉದ್ಯಮಿ ಶಬೀರ್ ಹುಸೇನ್ ಎಂಬುವರ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಮನೆಯ ಒಂದು ಭಾಗ ಸ್ಫೋಟಗೊಂಡಿದ್ದು, ಉಳಿದ ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದೆ. ಮನೆ ನದಿಯ ತಟದಲ್ಲಿದ್ದು, ಸ್ಫೋಟದಿಂದಾಗಿ ಮನೆಯ ಬಹುತೇಕ ಭಾಗ ಕುಸಿದು ಹೋಗಿದೆ. ಭಾರೀ ಸಂಖ್ಯೆಯ ಪಟಾಕಿಗಳನ್ನು ಮನೆಯೊಳಗೆ ಇಡಲಾಗಿತ್ತು. ಅದು ಸ್ಫೋಟಿಸಲು ಪ್ರಾರಂಭವಾದಾಗಿನಿಂದ ಸುಮಾರು 1 ಗಂಟೆಯವರೆಗೆ ನಿರಂತರವಾಗಿ ಸಿಡಿದಿದೆ ಎಂದು ವರದಿಗಳು ತಿಳಿಸಿವೆ.

ಪಟಾಕಿ ಸಿಡಿದು ಮನೆ ಕುಸಿತವಾಗಿದ್ದರಿಂದ 6 ಮಂದಿ ಸಾವನ್ನಪ್ಪಿದ್ದಾರೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸ್ಫೋಟದ ಹಿಂದಿನ ಕಾರಣವನ್ನು ನಾವು ತನಿಖೆ ಮಾಡುತ್ತಿದ್ದೇವೆ. ವಿಧಿವಿಜ್ಞಾನ ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳವನ್ನೂ ಕರೆಯಲಾಗಿದೆ ಎಂದು ಸರನ್ ಎಸ್ಪಿ ಸಂತೋಷ್ ಕುಮಾರ್ ತಿಳಿಸಿದ್ದಾರೆ.

Edited By : Vijay Kumar
PublicNext

PublicNext

24/07/2022 09:01 pm

Cinque Terre

27.05 K

Cinque Terre

1

ಸಂಬಂಧಿತ ಸುದ್ದಿ