ದೆಹಲಿ: ಅಪ್ಪನ ಮೇಲೆ ಅದೊಂದಿನ ಹಲ್ಲೆ ನಡೆದಿತ್ತು. ಆ ಸೇಡು ಈ ಅಪ್ರಾಪ್ತ ಬಾಲಕನ ಎದೆಯಲ್ಲಿ ಕುದಿಯುತ್ತಲೇ ಇತ್ತು. ಅದಕ್ಕೇನೆ ಆ ವ್ಯಕ್ತಿ ಮೇಲೆ ತನ್ನ ಗೆಳೆಯರ ಜೊತೆಗೂಡಿ ಆ ಬಾಲಕ ಗುಂಡು ಹಾರಿಸಿಯೇ ಬಿಟ್ಟ. ಈ ಒಂದು ಘಟನೆ ದೆಹಲಿಯ ಜಹಾಂಗೀರ್ಪುರಿಯಲ್ಲಿ ನಡೆದಿದೆ.
ಅಪ್ರಾಪ್ತ ಬಾಲಕ ಗುಂಡು ಹಾರಿಸಿರೋ ವ್ಯಕ್ತಿಯ ಹೆಸರು ಜಾವೇದ್ (36). ಈತ ಇಲ್ಲಿಯ ಜಹಾಂಗೀರ್ಪುರಿಯ ಪಾರ್ಕ್‌ನಲ್ಲಿ ಬಳಿಯ ಕುಳಿತಿದ್ದರು. ಆಗಲೇ ಬಾಲಕರು ಗುಂಪೊಂದು ಈ ವ್ಯಕ್ತಿ ಬಳಿ ಬಂದಿತ್ತು. ಅದರ ಒಬ್ಬ ಹುಡುಗ ವ್ಯಕ್ತಿ ಮೇಲೆ ಗುಂಡು ಹಾರಿಸಿದ್ದಾನೆ.
ದಿಢೀರ್ ಗುಂಡಿನ ದಾಳಿ ಬಳಿಕ ಜಾವೇದ್ ಗಂಭೀರ ಗಾಯಗೊಂಡಿದ್ದು ಸದ್ಯ ಆಸ್ಪತ್ರೆಯಲ್ಲಿಯೇ ದಾಖಲಾಗಿದ್ದಾನೆ. ಅಪ್ರಾಪ್ತ ಬಾಲಕನ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
PublicNext
18/07/2022 01:13 pm