ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಕಿರು ಸೇತುವೆ ಮೇಲೆ ಯುವಕರ ಹುಚ್ಚಾಟ-ಕಪಾಳಕ್ಕೆ ಹೊಡೆದೇ ಬಿಟ್ಟರು ಇಂಜಿನಿಯರ್ ಶಿವಶಂಕರ್ !

ಕೊಪ್ಪಳ: ಜಿಲ್ಲೆಯಲ್ಲಿ ಮಳೆಗೆ ಹಳ್ಳ-ಕೊಳ್ಳ ತುಂಬಿ ಹರಿಯುತ್ತಿವೆ.ಕೊಪ್ಪಳ ತಾಲೂಕಿನ ಮುನಿರಾಬಾದ್ ಕಿರು ಜಲಾಶಯಕ್ಕೂ ನೀರು ಹರಿದು ಬರ್ತಿದ್ದು,ಸಂಪೂರ್ಣ ತುಂಬಿದೆ.

ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಜಲಾಶಯದ ಬಳಿ ತೆರಳದಂತೆ ಎಚ್ಚರಿಕೆ ನೀಡಿದ್ದಾರೆ. ಆದರೂ ಯುವಕ-ಯುವತಿಯರು ಜಲಾಶಯದ ಬಳಿ ತೆರಳಿ ಹುಚ್ಚಾಟ ಮೆರೆಯುತ್ತಿದ್ದಾರೆ.

ಮುನಿರಾಬಾದ್ ಮತ್ತು ಹೊಸಪೇಟೆಗೆ ಸಂಪರ್ಕ ಕಲ್ಪಿಸೋ ಈ ಸೇತುವೆಗೆ ತಡೆಗೋಡೆ ಕೂಡ ಇಲ್ಲ. ಆದರೆ, ಯುವಕರು ಇಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಇದೇ ವೇಳೆ ಇಲ್ಲಿಗೆ ಬಂದಿದ್ದ ಇಂಜಿನಿಯರ್ ಶಿವಶಂಕರ್ ಸೇತುವೆ ಮೇಲೆ ಹುಚ್ಚಾಟ ಮಾಡ್ತಿದ್ದ ಯುವಕರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಆ ವೀಡಿಯೋ ಈಗ ಹೆಚ್ಚು ಗಮನ ಸೆಳೆಯುತ್ತಿದೆ.

Edited By :
PublicNext

PublicNext

14/07/2022 03:46 pm

Cinque Terre

105.42 K

Cinque Terre

8

ಸಂಬಂಧಿತ ಸುದ್ದಿ