ದಾವಣಗೆರೆ: ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿರುವ ಪೂಜಾ ವೈನ್ ಶಾಪ್‌ನಲ್ಲಿ ಮದ್ಯ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹದಡಿ, ಮಾಯಕೊಂಡ ಸೇರಿಸಂದೆ ಒಟ್ಟು 5 ಕಡೆಗಳಲ್ಲಿ ಆರೋಪಿಗಳು ಮದ್ಯ ಕಳ್ಳತನ ಮಾಡಿದ್ದರು. ಆರೋಪಿಗಳ ಪತ್ತೆಗೆ ಗ್ರಾಮೀಣ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಕನಿಕಾ ಸಿಕ್ರಿವಾಲ್ ಮಾರ್ಗದರ್ಶನದಲ್ಲಿ ಹರಿಹರ ವೃತ್ತದ ಸಿಪಿಐ ತಿಮ್ಮಣ್ಣರ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಠಾಣೆಯ ಪಿಎಸ್ ಐ ವೀರಬಸಪ್ಪ ಕುಸಲಾಪುರ, ಅಬ್ದುಲ್ ಖಾದರ್ ಜೇಲಾನಿ, ಎಎಸ್ಐ ರಾಮಚಂದ್ರಪ್ಪ ಮತ್ತಿತರ ಸಿಬ್ಬಂದಿಯ ತಂಡ ರಚಿಸಲಾಗಿತ್ತು.
ಆರೋಪಿಗಳನ್ನು ಬಂಧಿಸಿ, 1,35,000 ನಗದು, ಏಳು ಲಕ್ಷ ರೂಪಾಯಿ ಬೆಲೆ ಬಾಳುವ ಬುಲೆರೋ ವಾಹನ ಸೇರಿದಂತೆ ಒಟ್ಟು 8,35,000 ರೂ ಮೌಲ್ಯದ ಸ್ವತ್ತು ಹಾಗೂ ಹಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆ ಹಾಗೂ ಸ್ವತ್ತು ವಶಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಶ್ಲಾಘಿಸಿದ್ದಾರೆ.
PublicNext
05/07/2022 05:16 pm