ಬೆಂಗಳೂರು: ಮಾಜಿ ಸಚಿವೆ ಡಾ. ಬಿ.ಟಿ.ಲಲಿತಾ ನಾಯಕ್ ರವರು ,ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಕುಮಾರ ಸ್ವಾಮಿ , ಸಿದ್ದರಾಮಯ್ಯ ಸೇರಿ ಕೆಲವು ಸಾಹಿತಿಗಳ ಹೆಸರು ಉಲ್ಲೇಖಿಸಿ ಕೊಲೆ ಬೆದರಿಕೆ ಪತ್ರ ವನ್ನು ದುಷ್ಕರ್ಮಿಗಳು ಬರೆದಿದ್ದಾರೆ.ಡಾ.ಬಿ.ಟಿ.ಲಲಿತಾನಾಯಕ್ ರವರ ಸಂಜಯನಗರ ನಿವಾಸದ ವಿಳಾಸಕ್ಕೆ ಪತ್ರ ಬರೆದಿರುವ ಕಿಡಿಗೇಡಿಗಳು, ಈ ಹಿಂದೆ 2015ರಲ್ಲೂ ಇದೇ ರೀತಿ ಬೆದರಿಕೆ ಪತ್ರ ಬರೆದಿದ್ರು.
ಈ ಬಗ್ಗೆ ಲಲಿತಾ ನಾಯಕ್ ಸಂಜಯ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ರು.ಕೇಸ್ ಮಾಡಿ ಆರೋಪಿಗಳಿಗಾಗಿ ತೀವ್ರ ಹುಡುಕಾಟ ಮಾಡಿದ್ರು ಆರೋಪಿ ಪತ್ತೆಯಾಗಿರಲಿಲ್ಲ.ಹೀಗಾಗಿ ಕೋರ್ಟ್ ಗೆ ಆರೋಪಿ ಸಿಕ್ಕಿಲ್ಲ ಎಂದು ಸಂಜಯ್ ನಗರ ಪೊಲೀಸರು ಸಿ ರಿಪೋರ್ಟ್ ಸಲ್ಲಿಸಿದ್ದರು.
ಸದ್ಯ ಸಂಜಯ್ ನಗರದ ಅಮರ್ ಜ್ಯೋತಿ ಲೇಔಟ್ ನಲ್ಲಿ ವಾಸವಾಗಿರುವ ಲಲಿತಾ ನಾಯಕ್ ಗೆ ಮತ್ತೊಮ್ಮೆ ಬೆದರಿಕೆ ಪತ್ರ ಬಂದಿದ್ದು, ಪಠ್ಯದಲ್ಲಿ ದೇಶ ಪ್ರೇಮ,ದೇಶ ಭಕ್ತಿ,ದೇಶ ರಕ್ಷಣೆ ಪಾಠ ಸೇರಿಸಿದಕ್ಕೆ ನಿಮ್ಗೆಲ್ಲ ಭಯ ನೀವು ನಿಜವಾದ ದೇಶ ದ್ರೋಹಿಗಳು ನಮ್ಮ ದೇಶವನ್ನು ನಾಶ ಮಾಡಲು ಹೊಂಚು ಹಾಕುತ್ತಿದ್ದೀರಾ..?
ಭಯೋತ್ಪಾದಕರು ,ನಕ್ಸಲೈಟ್ ಗಳು,ಮಾವೋವಾದಿಗಳು ,ದೇಶ ದ್ರೋಹಿ ಮುಸ್ಲಿಂಮರಿಗೆ ಬೆಂಬಲವಾಗಿ ನಿಂತಿದ್ದೀರಿ.
ಪಿಎಫ್ ಐ ಕಾರ್ಯಕ್ರಮದಲ್ಲಿ ನಮ್ಮ ವೀರ ಸೈನಿಕರ ಬಗ್ಗೆ ಅಗೌರವವಾಗಿ ಮಾತನಾಡಿದ್ದೀರಿ.? ನೀವು ಕ್ಷಮೆ ಕೇಳಬೇಕು ನೀವು ಎಚ್ಚರಿಕೆಯಿಂದ ಇರಿ. ಎಂದು ಕಿಡಿಗೇಡಿಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ ಮಾಜಿ ಮುಖ್ಯಂಮತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹರಿಪ್ರಸಾದ್ ಹೆಸ್ರು ಉಲ್ಲೇಖಿಸಿದ್ದಾರೆ.
PublicNext
02/07/2022 10:26 pm