ನವದೆಹಲಿ: ಉದಯಪುರ ಟೈಲರ್ ಕನ್ಹಯ್ಯ ಹತ್ಯೆಯ ಬಳಿಕ ಅದೇ ವೀಡಿಯೋವನ್ನ ಉಚ್ಛಾಟಿತ ಬಿಜೆಪಿ ನಾಯಕ ನವೀನ್ ಜಿಂದಾಲ್‌ರಿಗೂ ಕಳಿಸಿ ಬೆದರಿಕೆ ಹಾಕಲಾಗಿದೆ ಎಂದು ಸ್ವತಃ ನವೀನ್ ಜಿಂದಾಲ್ ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ.
ಬಿಜೆಪಿಯ ಉಚ್ಛಾಟಿತ ನಾಯಕ ನವೀನ್ ಜಿಂದಾಲ್ ಕೂಡ ಪ್ರವಾದಿ ಮೊಹಮ್ಮದ್ ಬಗ್ಗೆ ಮಾತನಾಡಿದ್ದರು.ಅದಕ್ಕೇನೆ ಈಗ ನವೀನ್ ಜಿಂದಾಲ್‌ಗೂ ಬೆದರಿಕೆ ಕರೆ ಬರ್ತಿವೆ.
ಆದರೆ, ಕನ್ಹಯ್ಯ ಲಾಲ್ ತಲೆ ಕತ್ತರಿಸಿದ ಆ ವೀಡಿಯೋವನ್ನ ನೇರವಾಗಿ ನವೀನ್ ಜಿಂದಾಲ್‌ಗೆ ಶೇರ್ ಮಾಡಿ ಧಮ್ಕಿ ಹಾಕಲಾಗಿದ್ದು, ಬೆದರಿಕೆಯ ಎರಡು ಇ ಮೇಲ್ ಕೂಡ ಬಂದಿವೆ ಎಂದು ನವೀನ್ ಹೇಳಿಕೊಂಡಿದ್ದಾರೆ.
PublicNext
29/06/2022 04:02 pm