ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಮ್ಮಿಂದ ಜಿಲ್ಲೆಯ ಹೆಸರು ಹಾಳಾಗಿದೆ: ಭೀಮಾತೀರದ ರೌಡಿಶೀಟರ್ ಮಹಾದೇವ ಸಾಹುಕಾರ್‌ಗೆ ಎಸ್‌.ಪಿ ವಾರ್ನಿಂಗ್

ವಿಜಯಪುರ: ಭೀಮಾತೀರದ ಹತ್ಯಾಕಾಂಡದಿಂದ ಜಿಲ್ಲೆಯ ಹೆಸರು ಹಾಳಾಗಿದೆ‌. ನಿಮ್ಮಿಬ್ಬರ ಕುಟುಂಬಕ್ಕೆ ವಿಜಯಪುರ ಹೆಸರು ಕೆಟ್ಟಿದೆ. ಮನೆಯಲ್ಲಿ ಎಷ್ಟು ವೆಪನ್ ಇಟ್ಟಿದಿಯಾ? ಹೊಡೆಯೋದು ಬಡಿಯೋದು ಬಿಟ್ಟಿದಿಯಾ? ಅಥವಾ ಇನ್ನೂ ಅದನ್ನೇ ಮಾಡ್ತಾ ಇದಿಯಾ? ಮಧ್ಯಪ್ರದೇಶದಿಂದ ನಕಲಿ ವೆಪನ್ ತರಿಸೋದು, ಇಲ್ಲಿ ಬಂದು ಗೂಂಡಾಗಿರಿ ಮಾಡೋದು. ಬರೀ ಇದೇ ಆಯ್ತಲ್ಲಯ್ಯ ನಿಂದು. ಇದೆಲ್ಲ ಬಿಟ್ಟು ಸರಿಯಾಗಿ ಬದುಕು. ಇಲ್ಲದಿದ್ರೆ ಗ್ರಹಚಾರ ಬಿಡಿಸಿಬಿಡ್ತೀನಿ.

ಹೀಗೆ ಭೀಮಾ ತೀರದ ರೌಡಿ ಶೀಟರ್ ಮಹದೇವ ಸಾಹುಕಾರ್‌ಗೆ ವಿಜಯಪುರ ಜಿಲ್ಲ ಪೊಲೀಸ್ ವರಿಷ್ಟಾಧಿಕಾರಿ ಎಚ್‌.ಡಿ ಆನಂದಕುಮಾರ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ಪೊಲೀಸ ಠಾಣಾ ಆವರಣದಲ್ಲಿ ಹಮ್ಮಿಕೊಂಡಿದ್ದ ರೌಡಿಶೀಟರ್‌ ಪರೇಡ್‌ನಲ್ಲಿ ಎಸ್‌.ಪಿ ಆನಂದಕುಮಾರ್ ಈ ರೀತಿ ಎಚ್ಚರಿಕೆ ನೀಡಿದ್ದಾರೆ.

ಎರಡು ಕುಟುಂಬದ ದ್ವೇಷದಿಂದ ಜಿಲ್ಲೆಯ ಹೆಸರು ಹಾಳಾಗಿದೆ. ಇನ್ಮೇಲೆ ಕೊಲೆ ಮಾಡುವ ಪ್ಲ್ಯಾನ್ ಇದ್ರೆ, ಮನೆಯಲ್ಲಿ ಅಕ್ರಮ ಗನ್ ಇಟ್ಟಿದ್ರೆ ಗ್ರಹಚಾರ ಬಿಡಿಸ್ತೀನಿ ಎಂದು ಮಹದೇವ ಸಾಹುಕಾರ್‌ಗೆ ಚಳಿ ಬಿಡಿಸಿದ್ದಾರೆ.

Edited By : Shivu K
PublicNext

PublicNext

29/06/2022 09:14 am

Cinque Terre

122.3 K

Cinque Terre

3