ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನೈತಿಕ ಸಂಬಂಧ ಶಂಕೆ – ಹೆಂಡತಿ ರುಂಡ ಮುಂಡ ಬೇರ್ಪಡಿಸಿದ ಪಾಪಿ ಪತಿ!

ಮೈಸೂರು : ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ ಮಡದಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ ಪಾಪಿ ಪತಿ ಆಕೆಯ ರುಂಡ ಮುಂಡ ಬೇರ್ಪಡಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಹೌದು ಮೈಸೂರಿನ ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಚೆಟ್ಟನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಪುಟ್ಟಮ್ಮ(40) ಮೃತ ದುರ್ದೈವಿ. ಸದ್ಯ ಪತಿ ದೇವರಾಜ್ ಬಂಧನಕ್ಕೆ ವರುಣಾ ಪೊಲೀಸರು ಬಲೆ ಬೀಸಿದ್ದಾರೆ.

ಮೊದಲ ಹೆಂಡತಿಯನ್ನೂ ಕೊಲೆ ಮಾಡಲು ಯತ್ನಿಸಿ ಜೈಲು ವಾಸ ಅನುಭವಿಸಿದ್ದ ದೇವರಾಜ್. ಮೊದಲ ಹೆಂಡತಿಯಿಂದ ದೂರವಾದ 21 ವರ್ಷಗಳ ಹಿಂದೆ ಪುಟ್ಟಮ್ಮಳನ್ನ ಎರಡನೇ ವಿವಾಹವಾಗಿದ್ದ.ಎರಡನೇ ಮದುವೆ ಆದರೂ ಪುಟ್ಟಮ್ಮಳ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ. ಇನ್ನು ಪುಟ್ಟಮ್ಮ ಮತ್ತು ದೇವರಾಜ್ ಗೆ 20 ವರ್ಷದ ಮಗಳಿದ್ದರೂ ಪತ್ನಿ ಶೀಲದ ಮೇಲೆ ಶಂಕೆ ವ್ಯಕ್ತಪಡಿಸುವುದನ್ನು ಬಿಟ್ಟಿರಲಿಲ್ಲ.

ಇನ್ನು ಕಳೆದ ಒಂದು ತಿಂಗಳಿಂದ ಪುಟ್ಟಮ್ಮಳಿಗೆ ಕಿರುಕುಳ ಹೆಚ್ಚಾಗಿತ್ತು.ಮಗಳು ಪವಿತ್ರ ಕಾಲೇಜಿಗೆ ಹೋಗಿದ್ದ ವೇಳೆ ಇದೇ ವಿಚಾರಕ್ಕೆ ಕ್ಯಾತೆ ತೆಗೆದ ದೇವರಾಜ್. ಪತ್ನಿಯ ರುಂಡ ಮುಂಡವನ್ನ ಬೇರೆ ಆಗುವಂತೆ ಭೀಕರವಾಗಿ ಕೊಲೆ ಮಾಡಿದ್ದಾನೆ.ಸದ್ಯ ದೇವರಾಜ್ ವಿರುದ್ದ ಮಗಳು ಪವಿತ್ರ ದೂರು ದಾಖಲಿಸಿದ್ದು, ವರುಣಾ ಠಾಣೆ ಪೊಲೀಸರು ದೇವರಾಜ್ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

Edited By : Nirmala Aralikatti
PublicNext

PublicNext

28/06/2022 01:42 pm

Cinque Terre

77.64 K

Cinque Terre

3

ಸಂಬಂಧಿತ ಸುದ್ದಿ