ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಡು ರಸ್ತೆಯಲ್ಲಿ ಲಾರಿ ಚಾಲಕನಿಗೆ ಬೂಟು ಕಾಲಿಂದ ಒದ್ದ ಪೊಲೀಸಪ್ಪ : ವಿಡಿಯೋ ವೈರಲ್

ತಿರುಪತಿ: ಜನನಿಬಿಡ ರಸ್ತೆಯಲ್ಲಿ ಸಂಚಾರ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರು ಲಾರಿ ಚಾಲಕನಿಗೆ ಬೂಟು ಕಾಲಿಂದ ಒದ್ದುದರ್ಪ ತೋರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನ್ನಮಯ್ಯ ವೃತ್ತದಲ್ಲಿ ಟ್ರಾಫಿಕ್ ಪೊಲೀಸ್ ಹೆಡ್ ಕಾನ್ಸ್ ಟೇಬಲ್

ಟಿ.ಜಗದೀಶ್ ಕೀಶೋರ್ ಹಾಗೂ ಲಾರಿ ಚಾಲಕನ ನಡುವೆ ವಾಗ್ವಾದ ನಡೆದು, ಲಾರಿ ಚಾಲಕನಿಗೆ ಕಾನ್ಸ್ ಟೇಬಲ್ ತನ್ನ ಬೂಟು ಕಾಲಿನಿಂದ ಹಿಗ್ಗಾಮುಗ್ಗ ಒದ್ದಿದ್ದಾರೆ.

ಈ ಘಟನೆಯ ನಂತರ ಆ ಕಾನ್ಸ್ ಟೇಬಲ್ ನನ್ನು ಅಮಾನತುಗೊಳಿಸಲಾಗಿದೆ. ಅನ್ನಮಯ್ಯ ವೃತ್ತದಲ್ಲಿ ಹೆಡ್ ಕಾನ್ಸ್ ಟೇಬಲ್ ಜಗದೀಶ್ ಕಿಶೋರ್ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಡ್ಡರಸ್ತೆಯಲ್ಲಿ ಲಾರಿಯೊಂದು ಬಂದು ನಿಂತಿತ್ತು. ಈ ವೇಳೆ ಕಾನ್ಸ್ ಟೇಬಲ್ ಟ್ರಕ್ ಅನ್ನು ಬೇರೆ ಕಡೆ ತೆಗೆದುಕೊಂಡು ಹೋಗುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಆ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು, ತಾಳ್ಮೆ ಕಳೆದುಕೊಂಡ ಪೊಲೀಸ್ ಬೂಟುಕಾಲಿನಿಂದ ಒದ್ದಿದ್ದಾರೆ.

Edited By : Nirmala Aralikatti
PublicNext

PublicNext

13/06/2022 10:39 pm

Cinque Terre

84.94 K

Cinque Terre

17