ಕಲಬುರಗಿ: ಹೆಂಡತಿ ತೀರಿದ ಬಳಿಕ ಆತ ಎರಡನೇ ಮದುವೆ ಮಾಡಿಕೊಂಡಿದ್ದ. ಮೊದಲನೆ ಹೆಂಡತಿಗೆ ಒಂದು ಗಂಡು ಮಗು ಇದೆ. ಸದ್ಯ ಆ ಮಗು ಮಾತು ಕೇಳುತ್ತಿಲ್ಲ ಎಂದು ಮಲತಾಯಿ ಕಾದ ಕಬ್ಬಿಣದಿಂದ ಕೈ ಸುಟ್ಟ ಅಮಾನವೀಯ ಘಟನೆ ಚಿತ್ತಾಪೂರ ತಾಲೂಕಿನ ನಾಲವಾರ ಸ್ಟೇಷನ್ ಏರಿಯಾದಲ್ಲಿ ನಡೆದಿದೆ.
ನಾಲವಾರ ತಾಂಡಾ ನಿವಾಸಿ ಮರೆಮ್ಮ ಎಂಬಾಕೆಯೇ ನಾಲ್ಕು ವರ್ಷದ ಮಗುವಿನ ಮೇಲೆ ವಿಕೃತಿ ಮೆರೆದಿದ್ದಾಳೆ. ಕಾದ ಕೊಳವೆಯಿಂದ ಕೈಗೆ ಸುಟ್ಟು, ಮಂಚಕ್ಕೆ ಕಟ್ಟಿ ಹಾಕಿದ್ದಾಳೆ. ಮಗುವಿನ ತಂದೆ ತಿಪ್ಪಣ್ಣನ ಹೆಂಡತಿ ಹಾಗೂ ಮಗುವನ್ನ ಬಿಟ್ಟು ಕೆಲಸದ ನಿಮಿತ್ತ ಪುಣೆಗೆ ಹೋಗಿದ್ದಾರೆ. ಈ ವೇಳೆ ಮಲತಾಯಿ ಅಮಾನವೀಯ ಕೃತ್ಯವನ್ನು ಎಸಗಿದ್ದಾಳೆ. ಎರಡು ದಿನಗಳಿಂದ ಮಗು ಆಚೆ ಬಾರದಿದ್ದಕ್ಕೆ ಸ್ಥಳೀಯರು ಗಮನಿಸಿ ಮನೆಯಲ್ಲಿದ್ದ ಮಗುವನ್ನು ರಕ್ಷಿಸಿದ್ದಾರೆ.
ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿ ಮಲತಾಯಿಗೆ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಸದ್ಯ ಸ್ಥಳೀಯರು ವಾಡಿ ಪೊಲೀಸರಿಗೆ ಮಾಹಿತಿ ನೀಡಿ ಮಗುವನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ.
PublicNext
07/06/2022 05:24 pm