ಬೆಂಗಳೂರು: ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಆಗಿದ್ದ ತಾಲೀಬ್ ಹುಸೇನ್ ನ ಜಮ್ಮು ಕಾಶ್ಮೀರ್ ಪೊಲೀಸ್ ಹಾಗೂ 17 ನೇ ರಾಷ್ಟ್ರೀಯ ರೈಫಲ್ಸ್ ಜಂಟಿ ಕಾರ್ಯಾಚರಣೆ ನಡೆಸಿ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಸ್ಥಳೀಯ ಪೊಲೀಸರ ಸಹಾಯ ಪಡೆದು ಉಗ್ರನನ್ನು ಬಂಧಿಸಲಾಗಿದೆ. ಹೌದು ಪೊಲೀಸರ ಹಿಟ್ ಲಿಸ್ಟ್ ನಲ್ಲಿದ್ದ ತಾಲೀಬ್ ಹುಸೇನ್ ಕಳೆದ ಎಂಟು ತಿಂಗಳಿನಿಂದ ಬೆಂಗಳೂರಿನ ಶ್ರೀರಾಮಪುರದಲ್ಲಿ ನೆಲಸಿದ್ದ.
ಸದ್ಯ ಉಗ್ರ ತಾಲೀಬ್ ಹುಸೇನ್ ಬಂಧನವನ್ನು ಜಮ್ಮು ಕಾಶ್ಮೀರ ಡಿಜಿ ಅಧಿಕೃತಗೊಳಿಸಿದ್ದಾರೆ.
ಇನ್ನೂ ಬಂಧಿತ ಉಗ್ರನ ವಿಚಾರವಾಗಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪ್ರತಿಕ್ರಿಯಿಸಿದ್ದು ಯಾವ ಕಾರಣಕ್ಕೆ ಬಂಧನವಾಗಿದೆ ಎಂದು ನಮಗೆ ಮಾಹಿತಿ ನೀಡಿಲ್ಲ.
ಬೆಂಗಳೂರು ಸಾಕಷ್ಟು ಬಾರಿ ಉಗ್ರರರನ್ನು ಪತ್ತೆ ಹಚ್ಚಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ. ಉಗ್ರರು ಇಲ್ಲಿ ಎಲ್ಲಿ ಉಳಿದುಕೊಂಡಿದ್ದ ಆ ಜಾಗದ ಬಗ್ಗೆ ಸರಿಯಾದ ಮಾಹಿತಿ ಇಲ್ಲ.ಇದರ ಬಗ್ಗೆ ತನಿಖೆ ಮಾಡ್ತೀವಿ ಎಂದು ಪ್ರತಿಕ್ರಿಯಿಸಿದ್ದಾರೆ.
PublicNext
07/06/2022 12:13 pm