ಹಾಸನ: ಜೆಡಿಎಸ್ ಮುಖಂಡ ಪ್ರಶಾಂತ್ ಅವರ ಭೀಕರ ಹತ್ಯೆ ಸುದ್ದಿ ಕೇಳಿದ ಹಾಸನ ನಗರದ ಮಂದಿ ಬೆಚ್ಚಿ ಬಿದ್ದಿದ್ದಾರೆ. ಕೊಲೆ ನಡೆದ ಲಕ್ಷ್ಮಿಪುರ ಬಡಾವಣೆ ರಸ್ತೆಯಲ್ಲಿ ಜನರ ಓಡಾಟವನ್ನು ಸಂಪೂರ್ಣ ಬಂದ್ ಮಾಡಿರುವ ಪೊಲೀಸರು ಸುತ್ತಲೂ ಪಹರೆ ಕಾಯುತ್ತಿದ್ದಾರೆ.
ಕೊಲೆಗೆ ಕಾರಣ ಏನು?
ಪೊಲೀಸ್ ಮೂಲಗಳ ಪ್ರಕಾರ, ಪ್ರಶಾಂತ್ ತಂದೆ ಹಾ.ರಾ ನಾಗರಾಜ್‌ರನ್ನು 2005ರಲ್ಲಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಇವರು ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರೂ ಆಗಿದ್ದರು. ತಂದೆಯ ಹತ್ಯೆ ಹಿನ್ನೆಲೆಯಲ್ಲಿ ಉದ್ಯಮಿ ಗ್ಯಾರಳ್ಳಿ ತಮ್ಮಯ್ಯ ಹತ್ಯೆ ಪ್ರಕರಣದಲ್ಲಿ ಪ್ರಶಾಂತ್ ಆರೋಪಿಯಾಗಿದ್ದ. ಕೇಸ್ ಖುಲಾಸೆಯಾದ ಬಳಿಕ ಯಾವುದೇ ಕಿರಿಕ್ ಇಲ್ಲದೇ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್, ಹಾಸನ ನಗರಸಭೆಗೆ 2018ರಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಆಯ್ಕೆ ಆಗಿದ್ದರು. ಹೀಗಾಗಿ ಹಳೆಯ ದ್ವೇಷಕ್ಕಾಗಿ ಪ್ರಶಾಂತ್‌ನನ್ನು ಕೊಲೆ ಮಾಡಲಾಗಿದೆ ಎಂಬುದು ಪ್ರಾಥಮಿಕ ಮಾಹಿತಿ ಇದೆ.
ಕೇಸ್ ದಾಖಲಿಸಿಕೊಂಡಿರುವ ಹಾಸನ ನಗರದ ಪೆನ್ಶನ್ ಮೊಹಲ್ಲಾ ಪೊಲೀಸರು ಕೊಲೆ ಪಾತಕಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
PublicNext
02/06/2022 12:42 pm