ಜಮ್ಮು-ಕಾಶ್ಮೀರ್: ದಿ ಕಾಶ್ಮೀರಿ ಫೈಲ್ಸ್ ಚಿತ್ರ ಹತ್ತು ಹಲವು ಸತ್ಯಗಳನ್ನ ಹೇಳಿದೆ. ಇದೇ ಚಿತ್ರದ ಪರಿಣಾಮ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಹತ್ಯೆ ನಡೆಯುತ್ತಿವೆ ಅನ್ನೋ ಆರೋಪವೂ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಕಾಶ್ಮೀರಿ ಪಂಡಿತರ ಮೇಲೆ ಉಗ್ರರು ಮತ್ತೆ ದಾಳಿ ನಡೆಸುತ್ತಿದ್ದಾರೆ.
ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಕುಲ್ಗಾಂ ಜಿಲ್ಲೆಯ ಗೋಪಾಲ್ ಪುರದ ಕಾಶ್ಮೀರಿ ಪಂಡಿತರ ಮನೆತನದ ಮಹಿಳೆ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಪರಾರಿ ಆಗಿದ್ದಾರೆ.
ಉಗ್ರರ ಗುಂಡಿಗೆ ಬಲಿಯಾದ ಮಹಿಳೆಯನ್ನ ಸಂಬಾ ನಿವಾಸಿ ಎಂದು ಗುರುತಿಸಲಾಗಿದ್ದು, ಈ ಮಹಿಳೆ ಶಿಕ್ಷಕಿ ಆಗಿದ್ದರು. ಗುಂಡಿನ ದಾಳಿಗೆ ತೀವ್ರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
PublicNext
31/05/2022 01:00 pm