ಕೊಲ್ಕತ್ತಾ: ನಗರದ ನಿವಾಸವೊಂದರಲ್ಲಿ ಮತ್ತೋರ್ವ ಬಂಗಾಳಿ ಮಾಡೆಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಒಂದೇ ತಿಂಗಳ ಅವಧಿಯಲ್ಲಿ ಇದು ನಾಲ್ಕನೇ ಘಟನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇಕಪ್ ಆರ್ಟಿಸ್ಟ್ ಕೂಡಾ ಆಗಿದ್ದ 18 ವರ್ಷದ ಮಾಡೆಲ್ ಕಸ್ಬಾ ಪ್ರದೇಶದ ಬೆಡಿಯಾಡಂಗಾದಲ್ಲಿ ನಿವಾಸದಲ್ಲಿ ಭಾನುವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ಹೇಳಿದ್ದಾರೆ. ಕೆಲವೊಂದು ವೇದಿಕೆಗಳಲ್ಲಿ ಮಾಡೆಲ್ ಆಗಿ ಕಾಣಿಸಿಕೊಂಡಿದ್ದ ಯುವತಿ ಅನೇಕ ಅವಕಾಶಗಳನ್ನು ಸ್ವೀಕರಿಸಿದ್ದಾರೆ. ಶನಿವಾರ ರಾತ್ರಿ ತನ್ನ ದುಪ್ಪಟ್ಟದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದು ಆತ್ಮಹತ್ಯೆ ಕೇಸ್ ಎಂಬುದು ತಿಳಿದುಬಂದಿದೆ. ಆದರೆ, ಇತರ ಆಯಾಮಗಳಲ್ಲಿ ಕೂಡಾ ನೋಡಬೇಕಾದ ಅಗತ್ಯವಿದೆ. ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಪಲ್ಲವಿ ದೇವ್, ಮಂಜುಷಾ ನೆಯೋಗಿ ಹಾಗೂ ಬಿಡಿಶಾ ಡಿ ಮಜುಂದಾರ್ ಎಂಬದ ರೂಪದರ್ಶಿಯರ ಶವಗಳು ಇತ್ತೀಚೆಗಷ್ಟೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ರೂಪದರ್ಶಿಯರ ಸರಣಿ ಸಾವುಗಳು ನಡೆಯುತ್ತಿರುವುದರಿಂದ ಪೊಲೀಸರು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಶುರು ಹಚ್ಚಿಕೊಂಡಿದ್ದಾರೆ.
PublicNext
31/05/2022 08:00 am