ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಕನ ಮೇಲೆ ಬೀದಿ ನಾಯಿಗಳಿಂದ ಭೀಕರ ದಾಳಿ

ಜೈಪುರ್: ಮನೆಯ ಮುಂದೆ ಆಟವಾಡುತ್ತಿದ್ದ 9 ವರ್ಷದ ಬಾಲಕನೊಬ್ಬನ ಮೇಲೆ ಬೀದಿ ನಾಯಿಗಳು ಭೀಕರವಾಗಿ ದಾಳಿ ನಡೆಸಿದ ಘಟನೆ ರಾಜಸ್ಥಾನ್‌ದ ಜೈಪುರ್‌ನಲ್ಲಿ ನಡೆದಿದೆ. ಈ ಭೀಕರ ಘಟನೆಯ ವಿಡಿಯೋ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಐದು ನಾಯಿಗಳು ಏಕಾಏಕಿ ದಾಳಿ ನಡೆಸಿರುವ ಪರಿಣಾಮ ಬಾಲಕನಿಗೆ ದಿಕ್ಕು ತೋಚದಂತಾಗಿದೆ. ಹೀಗಾಗಿ ಆತನ ಮೈತುಂಬ ಕಚ್ಚಿ ಗಾಯಗೊಳಿಸಿವೆ. ಮೇ. 19ರಂದು ಈ ಘಟನೆ ನಡೆದಿದ್ದು, ಬಾಲಕನ ದೇಹದ ತುಂಬ 40ಕ್ಕೂ ಅಧಿಕ ಗಾಯಗಳು ಕಂಡು ಬಂದಿವೆ. ಆತನಿಗೆ ಈಗಾಗಲೇ ಚಿಕಿತ್ಸೆ ಕೊಡಿಸಲಾಗಿದ್ದು, ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆಂದು ತಿಳಿದು ಬಂದಿದೆ.

Edited By : Vijay Kumar
PublicNext

PublicNext

27/05/2022 08:34 pm

Cinque Terre

125.19 K

Cinque Terre

8

ಸಂಬಂಧಿತ ಸುದ್ದಿ