ಮುಂಬೈ: ಅಪ್ಪ ಅಂದ್ರೆ ಮಗಳಿಗೆ ಸೂಪರ್ ಹೀರೋ. ಆ ಸೂಪರ್ ಹೀರೋಗೂ ಮಗಳ ಮೇಲೆ ಅಪಾರ ಪ್ರೀತಿ ಇದ್ದೇ ಇರುತ್ತದೆ.ಅದರಂತೆ ಇದೇ ಅಪ್ಪ ಮಗಳ ಜನ್ಮ ದಿನಕ್ಕೆ ಆನ್ ಲೈನ್ ಮೂಲಕ ಬರ್ತ್ ಡೇ ಕೇಕ್ ಬುಕ್ ಮಾಡಲು ಹೋಗಿದ್ದಾರೆ. ಆದರೆ, ಆಗಿದ್ದು ಮಾತ್ರ ಖುಷಿ ಅಲ್ಲ.ಮಹಾ ಮೋಸವೇ ಆಗಿದೆ. ಹೇಗೆ ಅನ್ನೋದನ್ನ ಹೇಳ್ತಿವಿ ಬನ್ನಿ.
ಹೌದು. ಛತೀಸಗಢ್ ಮೂಲದ ತಂದೆ ಮಗಳ ಜನ್ಮ ದಿನಕ್ಕೆ ಕೇಕ್ ಬುಕ್ ಮಾಡಲು ಟ್ರೈ ಮಾಡಿದ್ದಾರೆ. ಅದಕ್ಕೇನೆ ಮುಂಬೈನ ಬಿಪಿಓವೊಂದರಲ್ಲಿ ಕೆಲಸ ಮಾಡ್ತಿದ್ದ ಮಗಳಿಗೆ ತಿಳಿಸಿದ್ದಾರೆ.ಹತ್ತಿರದ ಕೇಕ್ ಅಂಗಡಿ ಇದೆ. ಅದರ ನಂಬರ್ ಕೊಡ್ತೀನಿ ಅಂತ ಮಗಳೂ ಹೇಳಿದ್ದಾಳೆ. ಇಂಟರ್‌ನೆಂಟ್ ನಲ್ಲಿ ಸರ್ಚ್ ಮಾಡಿ ನಂಬರ್ ಅನ್ನ ಕೊಟ್ಟಿದ್ದಾಳೆ.
ಅದೇ ನಂಬರ್ ಗೆ ತಂದೆ ಕೇಕ್ ಬುಕ್ ಮಾಡಲು ಮುಂದಾಗಿದ್ದಾರೆ. ಆ ವಂಚಕ ಕೇಳಿದ ಬ್ಯಾಂಕ್ ಕಾರ್ಡ್ ನ ಎಲ್ಲ ಡೀಟೇಲ್ಸ್ ಕೊಟ್ಟಿದ್ದಾರೆ. ಅದಾದ ಮೇಲೆ ವಂಚಕ ತಂದೆಯ ಅಕೌಂಟ್ ನಿಂದ 1.91 ಲಕ್ಷ ರೂ ಎಗರಿಸಿದ್ದಾನೆ. ಇಷ್ಟೇ ಅಲ್ಲ. ಮಗಳಿಗೂ ಫೋನ್ ಮಾಡಿ ನಿಮ್ಮ ತಂದೆ ಅಕೌಂಟ್ ನಿಂದ ನನ್ನ ಅಕೌಂಟ್ ಗೆ ತಪ್ಪಾಗಿಯೇ ದುಡ್ಡು ಬಂದಿದೆ. ಅದನ್ನ ವಾಪಾಸ್ ಮಾಡುವೆ ಎಂದು ಹೇಳಿದ್ದಾನೆ. ಮಗಳ ಅಕೌಂಟ್ ಡೀಟೇಲ್ಸ್ ಪಡೆದು, ಇಲ್ಲಿಗೆ ನಿಮ್ಮ ತಂದೆ ದುಡ್ಡು ಹಾಕುವುದಾಗಿಯೂ ತಿಳಿಸಿದ್ದಾರೆ.
ಆದರೆ,ಅಪ್ಪನನ್ನ ದೋಚಿದ ಸೈಬರ್ ವಂಚಕ, ಮಗಳ ಅಕೌಂಟ್ ನಿಂದಲೂ 90 ಸಾವಿರ ರೂಪಾಯಿ ಎಗರಿಸಿದ್ದಾನೆ. ಈ ಬಗ್ಗೆ ಮಗಳು ಸದ್ಯ ಮುಂಬೈನ ವೇಗಲ್ ಎಸ್ಟೇಟ್ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಸೈಬರ್ ವಂಚಕನನ್ನ ಹಿಡಿಯಲು ಬಲೆ ಬೀಸಿದ್ದಾರೆ.
PublicNext
20/05/2022 11:15 am