ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಸಹೋದರನಿಂದ ಹೆಂಡತಿಗೆ ಕಿರುಕುಳ ಆರೋಪ ಪ್ರಕರಣ ಕೇಳಿ ಬಂದಿದ್ದು, ಸದ್ಯ ರವಿ ಚನ್ನಣ್ಣನವರ್ ಸಹೋದರ ರಾಘವೇಂದ್ರ ಡಿ ಚೆನ್ನಣ್ಣವರ್ ವಿರುದ್ದ ಎಫ್ ಐ ಆರ್ ದಾಖಲಾಗಿದೆ.ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು,2015 ರಲ್ಲಿ ರೋಜ ಎಂಬಾಕೆಯನ್ನು ರಾಘವೇಂದ್ರ ಚನ್ನಣ್ಣನವರ್ ಮದುವೆಯಾಗಿದ್ರು. ರೋಜಾ ಮದುವೆಗೂ ಮುನ್ನ ಮತ್ತೊಬ್ಬ ಮಹಿಳೆಯನ್ನ ಮದುವೆಯಾಗಿದ್ದು ಇದನ್ನ ಬಚ್ಚಿಟ್ಟು ನನ್ನ ಮದುವೆಯಗಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ.
ಖುದ್ದು ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಮದುವೆ ನಿಶ್ಚಯ ಮಾಡಿ ಮದುವೆ ಮಾಡಿಸಿದ್ರು.ಆದ್ರೀಗ ತಮ್ಮ ಮುಂಚೆಯೇ ಮದುವೆಯಾಗಿದ್ದು, ಇಬ್ಬರೂ ಒಟ್ಟಿಗೆ ಬಾಳಿ ಎನ್ನುತ್ತಿರೋದಾಗಿ ಎಫ್ ಐ ಆರ್ ನಲ್ಲಿ ಉಲ್ಲೇಖಿಸಿಲಾಗಿದೆ.ಮದುವೆಯಾದ ಒಂದು ವರ್ಷದಲ್ಲೇ ಹೆಂಡತಿ ಬಿಟ್ಟು ಆ ಮಹಿಳೆಯೊಂದಿಗೆ ರಾಘವೇಂದ್ರ ಸಂಸಾರ ಶುರು ಮಾಡ್ತಿದ್ರು, ಪ್ರಾರಂಭದಲ್ಲಿ ಸಮಯ ಹೀಗೆಲ್ಲ ಮಾಡ್ತಿದ್ದೀದ್ದಾನೆ ಎಲ್ಲಾಸರಿ ಹೋಗುತ್ತೆ ನೀನು ನಿನ್ನ ಉನ್ನತ ಶಿಕ್ಷಣದ ಕಡೆ ಗಮನ ಹರಿಸು ಎಂದಿದ್ರಂತೆ ರವಿ ಚನ್ನಣ್ಣನವರ್. ಆದ್ರೀಗ ಬಾಳುವುದಾದರೆ ರುಕ್ಮಿಣಿಯೊಂದಿಗೆ ಬಾಳು ಎಂದು ಹೇಳುತ್ತಿದ್ದಾರೆ.
ನನ್ನ ತಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದ್ದಾರೆ ನನಗೆ ನ್ಯಾಯ ಬೇಕು ಎಂದು ರೋಜ ದೂರು ನೀಡಿದ್ದಾರೆ.
PublicNext
18/05/2022 07:49 pm