ಮಂಡ್ಯ: ಗುರುದೇವೋ ಭವ ಎಂದು ಪೂಜಿಸುವ ಶಿಕ್ಷಕನೊಬ್ಬ ನೀಚ ಕೃತ್ಯವೆಸಗಿದ್ದಾರೆ. ಹೌದು 2ನೇ ತರಗತಿ ವಿದ್ಯಾರ್ಥಿನಿಗೆ ಮಾಸ್ತರನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕೆ ಆರ್ ಪೇಟೆ ತಾಲೂಕಿನ ಗಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲ್ಲೂಕಿನ ಗಂಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಚಂದ್ರಶೇಖರ್ ಎಂಬಾತನೇ ಈ ನೀಚ ಕೃತ್ಯವೆಸಗಿದ್ದಾನೆ.
ಮಾರ್ಚ್ 31ರಂದು ಶಾಲೆಗೆ ಹೋಗಿ ಬಂದಿದ್ದಂತ 2ನೇ ತರಗತಿ ವಿದ್ಯಾರ್ಥಿನಿ, ಇಂದು ಶಾಲೆಗೆ ಹೋಗೋದಿಲ್ಲ ಎಂಬುದಾಗಿ ಹಠ ಹಿಡಿದಳು. ಯಾಕೆ ಎಂಬುದಾಗಿ ಪೋಷಕರು ವಿಚಾರಿಸಿದಾಗ ವಿದ್ಯಾರ್ಥಿನಿ ಶಿಕ್ಷಕ ಚಂದ್ರಶೇಖರ್ ನೀಡುತ್ತಿದ್ದ ಲೈಂಗಿಕ ಕಿರುಕುಳ ಬಗ್ಗೆ ಹೇಳಿದ್ದಾಳೆ.
ಸದ್ಯ ಈ ವಿಷಯವನ್ನು ಗ್ರಾಮಸ್ಥರು ಬಿಇಒ ಗಮನಕ್ಕೆ ತಂದಿದ್ದಾರೆ. ಕೂಡಲೇ ಬಿಇಓ ಬಸವರಾಜ ಶಿಕ್ಷಕ ಚಂದ್ರಶೇಖರ್ ನನ್ನು ಅಮಾನತುಗೊಳಿಸಿದ್ದಾರೆ. ಪೋಷಕರು ದೂರು ನೀಡಿದ ಹಿನ್ನೆಲೆಯಲ್ಲಿ ಕಿಕ್ಕೇರಿ ಠಾಣೆ ಪೊಲೀಸರು ಶಿಕ್ಷಕನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
PublicNext
17/05/2022 05:02 pm