ಬೆಂಗಳೂರು: ಇಸ್ಪೀಟ್ ಅಡ್ಡೆ, ಕ್ಲಬ್ ಹೆಸರಿನಲ್ಲಿ ಅಕ್ರಮ ನಡೆಯುತ್ತಿದೆ ಅನ್ನೋದಕ್ಕೆ ಪುಷ್ಟಿ ನೀಡುವಂತೆ ಒಂದು ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಕ್ರಮ ಚಟುವಟಿಕೆಗಳಿಗೆ ಅವಕಾಶವಿಲ್ಲ ಅಂತ ಪೊಲೀಸರು ಹೇಳ್ತಾನೇ ಇರ್ತಾರೆ. ಆದ್ರೆ ತೆರೆಮರೆಯಲ್ಲಿ ಅದೆಷ್ಟೋ ಅಕ್ರಮಗಳು ನಡೆಯುತ್ತಿವೆ ಅನ್ನೋದಕ್ಕೆ ಒಂದೊಂದು ಸಾಕ್ಷ್ಯಗಳು ಸಿಗ್ತಾನೆ ಇವೆ. ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಅದೊಂದು ಆಡಿಯೋ ಕ್ಲಿಪ್, ನಗರದಲ್ಲಿ ಇಸ್ಪೀಟ್ ಕ್ಲಬ್‌ಗಳ ಅಸಲಿ ಕಹಾನಿಯನ್ನು ಬಿಚ್ಚಿಟ್ಟಿದೆ. ಆದ್ರೆ ಈ ಆಡಿಯೋ ಕ್ಲಿಪ್‌ನಲ್ಲಿ ಇರುವ ಪೊಲೀಸರ ಹೆಸರುಗಳು ಎಷ್ಟರಮಟ್ಟಿಗೆ ನಿಜ ಅನ್ನೋದು ಮಾತ್ರ ಕನ್ಫರ್ಮ್ ಆಗಿಲ್ಲ.
ಕ್ಲಬ್ ಮಾಲೀಕ ಮತ್ತು ಮಧ್ಯವರ್ತಿಯೊಬ್ಬ ಮಾತನಾಡಿರುವ 6 ನಿಮಿಷ 26 ಸೆಕೆಂಡ್ಸ್‌ಗಳ ಆಡಿಯೋ ಇದು. ಇದರಲ್ಲಿ ಮಧ್ಯವರ್ತಿ ಹೆಸರು ಹೇಳಿದ್ರೆ ಸಾಕಂತೆ. ಕಮಿಷನರ್ ಇರಲಿ, ಯಾರೇ ಇರಲಿ. ಆ ಇಸ್ಪೀಟ್ ಕ್ಲಬ್ ಮೇಲೆ ರೇಡ್ ಮಾಡಲ್ವಂತೆ.
ಈ ಆಡಿಯೋದಲ್ಲಿ ಮಾತನಾಡಿರುವ ವ್ಯಕ್ತಿ ಬೆಂಗಳೂರಿನ ಬಹುತೇಕ ಕ್ಲಬ್‌ನವರು ಈತನ ಜೊತೆಗೆ ಅಗ್ರಿಮೆಂಟ್ ಮಾಡ್ಕೊಂಡಿದ್ದಾರಂತೆ. ಇದಕ್ಕೆ ಕಾರಣ ಏನಂದ್ರೆ ಈತನ ಹೆಸರು ಹೇಳಿದ್ರೆ ಯಾವ ಪೊಲೀಸರೂ ಅಲ್ಲಿಗೆ ದಾಳಿ ಮಾಡಲ್ಲ ಅನ್ನೋದು. ಈಗಾಗಲೇ ನಗರದಲ್ಲಿ 7 ಕ್ಲಬ್‌ನವರು ಈತನ ಹೆಸರಿಗೆ ಅಗ್ರಿಮೆಂಟ್ ಹಾಕಿಕೊಂಡಿದ್ದಾರಂತೆ. ಹೀಗೆ ಅಗ್ರಿಮೆಂಟ್ ಹಾಕಿಕೊಂಡಿರುವ ಕ್ಲಬ್‌ನ ವಿವರಗಳನ್ನು ಸಿಸಿಬಿ ಜಂಟಿ ಆಯುಕ್ತ ರಮಣ ಗುಪ್ತಾ ಅವರಿಗೆ ನೀಡಿದ್ದಾರಂತೆ. ಇಷ್ಟಾದಮೇಲೂ ಯಾರಾದ್ರೂ ಪೊಲೀಸರು ಆ ಕ್ಲಬ್ ಮೇಲೆ ದಾಳಿ ಮಾಡಿದ್ರೆ ಅವರ ಪ್ಯಾಂಟ್ ಬಿಚ್ಚಿಸ್ತೀನಿ ಅಂತ ಆಡಿಯೋದಲ್ಲಿ ವ್ಯಕ್ತಿಯೊಬ್ಬ ಹೇಳಿದ್ದಾನೆ.
ಯಾರೋ ಮೂರನೆಯ ವ್ಯಕ್ತಿಯೊಬ್ಬ ಇಷ್ಟು ರಾಜಾರೋಷವಾಗಿ ಮಾತನಾಡಿರುವ ಈ ಆಡಿಯೋ ಇದೀಗ ಪೊಲೀಸ್ ವಲಯದಲ್ಲಿ ಮತ್ತು ಸರ್ಕಾರದ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು. ಸದ್ಯ ಸಿಸಿಬಿ ಅಧಿಕಾರಿಗಳು ಮಾತ್ರ ಈ ಆಡಿಯೋ ಕ್ಲಿಪ್ ಬಗ್ಗೆ ಗಂಭೀರವಾಗಿ ತನಿಖೆ ನಡೆಸ್ತಿದ್ದಾರೆ.
PublicNext
15/05/2022 10:55 pm